ತುಮಕೂರು: ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಗುಡುಗಿದ ಬೆನ್ನಲ್ಲಿಯೇ ಈಗ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಗುಡುಗಿದ್ದಾರೆ.
ತುಮಕೂರು ಲೋಕಸಭಾ ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಮಾಧುಸ್ವಾಮಿ, ಮನೆಯಲ್ಲಿ ಕುಳಿತಿದ್ದವರನ್ನು ಚುನಾವಣೆಗೆ ಸಿದ್ಧರಾಗಿ ಅಂದ್ರು. ಈಗ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ. ನಂಬಿಸಿ ಕೈಬಿಟ್ಟ ಯಡಿಯೂರಪ್ಪ ಮೇಲೆ ನಮಗೆ ಬೇಸರವಿದೆ ಎಂದು ಹೇಳಿದ್ದಾರೆ.
ಸೋಮಣ್ಣ ಅವಕಾಶವಾದಿ, ಅವರ ಮೇಲೆ ನಮಗೇನು ಬೇಸರ ಇಲ್ಲ. ಆದ್ರೆ, ನಂಬಿಸಿ ಕೈಬಿಟ್ಟ ಯಡಿಯೂರಪ್ಪ ಮೇಲೆ ನಮಗೆ ಬೇಸರವಾಗಿದೆ.
ನಾನು ಬಿಜೆಪಿಗೆ ಹೋಗಬೇಕು ಅಂದ್ರೆ ಯಡಿಯೂರಪ್ಪ ಬಿಟ್ಟು ಬೇರೆ ಕಾರಣ ಇರಲಿಲ್ಲ. ಕೆಜಿಪಿ ಪಾರ್ಟಿ ಮಾಡಿದಾಗ ಯಡಿಯೂರಪ್ಪಗೆ ಶಕ್ತಿ ಕೊಡಬೇಕು ಎಂದು ಕೆಜೆಪಿಗೆ ಹೋದವರು ನಾವು. ಯಡಿಯೂರಪ್ಪ ಬದಲಾದಂಗೆ ಅವರ ಜೊತೆ ಹೋದ್ವಿ ಅದೇ ತಪ್ಪಾ? ನಾವು ಪ್ರಶ್ನೆನೇ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.