Madhyapradesh – ತಮ್ಮನ ಶವ ಹೊತ್ತು ಬೀದಿ ಬದಿ ಕುಳಿತ ಬಾಲಕ….
ವಿಧಿ ಕೆಲವೊಮ್ಮೆ ಎಷ್ಟೊಂದು ಕಠೋರವಾಗಿ ವರ್ತಿಸುತ್ತದೆ ಎನ್ನುದಕ್ಕೆ ಇಂಥಹ ಘಟನೆಗಳೆ ಸಾಕ್ಷಿ, ಈಗೀನ ಕಾಲದಲ್ಲೂ ಆರೋಗ್ಯ, ಆಸ್ಪತ್ರೆ ಸೌಕರ್ಯಕ್ಕಾಗಿ ಬಡವರು ಕಷ್ಟ ಪಡುತ್ತಲೇ ಇದ್ದಾರೆ.
ಎಂಟು ವರ್ಷದ ಬಾಲಕನೊಬ್ಬ, 2 ವರ್ಷದ ತನ್ನ ಸಹೋದರನ ಶವವನ್ನು ಕೈಯಲ್ಲಿ ಹಿಡಿದು ರಸ್ತೆ ಬದಿಯಲ್ಲಿ ಅಸಹಾಯಕನಾಗಿ ಕುಳಿತಿರುವ ದೃಶ್ಯವನ್ನ ನೀವು ಗಮನಿಸಿದರೆ ಎಂಥ ಕಲ್ಲು ಹೃದಯವರಾದರೂ ಕಣ್ಣೀರು ಹಾಕುತ್ತೀರ..
“ನನ್ನ ತಮ್ಮನ ಶವವನ್ನೂ ಊರಿಗೆ ಕೊಂಡೊಯ್ಯಲು ನಮಗೆ ಯಾವುದೇ ವಾಹನ ಸಿಕ್ಕಿಲ್ಲ. ನನ್ನ ಅಪ್ಪ ಯಾವುದಾದರೂ ವಾಹನದ ವ್ಯವಸ್ಥೆ ಮಾಡುತ್ತೇನೆ ಎಂದು ರಸ್ತೆಯಲ್ಲಿ ಹುಡುಕಿಕೊಂಡು ಹೋಗಿದ್ದಾರೆ. ಅಲ್ಲಿಯವರೆಗೆ ನನ್ನಲ್ಲಿ ತಮ್ಮನ ಶವವನ್ನು ಹಿಡಿದುಕೊಂಡು ಕುಳಿತುಕೊಳ್ಳಲು ಹೇಳಿದ್ದಾರೆ” ಎಂದು ಬಾಲಕ ಹೇಳಿದ ವೀಡೀಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ನಡೆದಿದ್ದು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ. ಅಂಬಾಹ್ನ ಬದ್ಫ್ರಾ ಗ್ರಾಮದ ನಿವಾಸಿ ಪೂಜಾರಾಮ್ ಜಾತವ್ ಎಂಬವರು, ತನ್ನ ಎರಡು ವರ್ಷದ ಮಗ ರಾಜನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮಗು ಸಾವನ್ನಪ್ಪಿದೆ.
ಮಗುವಿನ ಶವವನ್ನ ಊರಿಗೆ ತೆಗೆದುಕೊಂಡು ಹೋಗಲು ನೆರವಾಗುವಂತೆ ಆದರೆ ಆಸ್ಪತ್ರೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಕನಿಷ್ಟ ಪಕ್ಷ ಮಾನವೀಯತೆಯ ನೆಲೆಯಲ್ಲಿಯೂ ಆಂಬುಲೆನ್ಸ್ ವ್ಯವಸ್ಥೆ ಮಾಡುವಲ್ಲಿ ಆಸ್ಪತ್ರೆ ಸಿಬ್ಬಂದಿ ವಿಫಲಾಗಿದ್ದಾರೆ. ಬಳಿಕ ಜಾತವ್ ಖಾಸಗಿ ಆಂಬ್ಯುಲೆನ್ಸ್ಗಳ ಮಾಲೀಕರ ಜೊತೆ ವಿಚಾರಿಸಿದ್ದಾರೆ. ಆದರೆ ಅವರು ಹೇಳಿದ ದುಬಾರಿ ಹಣ ಕೊಡಲು ತಂದೆಗೆ
“ಖಾಸಗಿ ಆಂಬ್ಯುಲೆನ್ಸ್ ಬಾಡಿಗೆಗೆ ತೆಗೆದುಕೊಳ್ಳುವಷ್ಟು ನನ್ನ ಬಳಿ ಹಣವಿರಲಿಲ್ಲ. ಹೀಗಾಗಿ ನಾನು ಬೇರೆಯವರ ಸಹಾಯ ಪಡೆಯಲು ಪ್ರಯತ್ನಿಸುತ್ತಿದ್ದೆ. ವಾಹನದ ವ್ಯವಸ್ಥೆ ಮಾಡುವಾಗ, ನನ್ನ ಹಿರಿಯ ಮಗನನ್ನು ರಸ್ತೆಯ ಬದಿಯಲ್ಲಿ ಶವದೊಂದಿಗೆ ಕುಳಿತುಕೊಳ್ಳಲು ಹೇಳಿದೆ” ಎಂದು ಜಾತವ್ ಅಸಹಾಯಕ ಧ್ವನಿಯಲ್ಲಿ ಹೇಳಿದ್ದಾರೆ.
ಇದನ್ನ ನೋಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸತ್ತ ಮಗುವನ್ನು ಮನೆಗೆ ಕೊಂಡೊಯ್ಯಲು ಎಲ್ಲರೂ ತಂದೆಗೆ ನೆರವಾಗಿದ್ದಾರೆ. madhya pradesh – Boy sits on roadside with his brother’s dead body








