ಭೋಪಾಲ್ : ಈ ಮೊದಲು ಚರಂಡಿ ಕ್ಲೀನ್ ಮಾಡಿ ಸದ್ದು ಮಾಡಿದ್ದ ಮಧ್ಯಪ್ರದೇಶದ ಸಚಿವ ಪ್ರಧುಮಾನ್ ಸಿಂಗ್ ತೋಮರ್ ಅವರು ಇದೀಗ ತಮ್ಮ ಕೈಯಾರೆ ಶೌಚಾಲಯ ಶುಚಿಗೊಳಿಸಿ ಸುದ್ದಿಯಾಗಿದ್ದಾರೆ.
ಸಚಿವ ಪ್ರಧುಮಾನ್ ಸಿಂಗ್ ಅವರಿಗೆ ಗ್ವಾಲಿಯರ್ ನ ಆಯುಕ್ತರ ಕಚೇರಿಯ ಸಾರ್ವಜನಿಕ ಶೌಚಾಲಯದ ಅವ್ಯವಸ್ಥೆ ಬಗ್ಗೆ ಮಹಿಳೆಯರು ದೂರು ನೀಡಿದ್ದರು. ಈ ಹಿನ್ನೆಲೆ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದ ಸಚಿವರಿಗೆ ಶೌಚಾಲಯ ಗಲೀಜಾಗಿರುವುದು ಕಂಡು ಬಂದಿದೆ.
ಕೂಡಲೇ ಸಚಿವರು ಟಾಯ್ಲೆಟ್ ಕ್ಲೀನರ್, ಬ್ರಶ್ ಇತ್ಯಾದಿಗಳನ್ನು ತಂದುಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿ ತಾವೇ ತಮ್ಮ ಕೈಯಾರೆ ಶೌಚಾಲಯ ಕ್ಲೀನ್ ಮಾಡಿದ್ದಾರೆ. ಅಲ್ಲದೆ ಸರ್ಕಾರಿ ಕಚೇರಿಗಳಲ್ಲಿನ ಶೌಚಾಲಯಗಳನ್ನು ಶುಚಿಯಾಗಿಡುವ ಜವಾಬ್ದಾರಿಯನ್ನು ಅಲ್ಲಿನ ನೌಕರರೇ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.