ಜಿರಳೆ ಕಾಟಕ್ಕೆ… 3 ವರ್ಷದಲ್ಲಿ 18 ಬಾರಿ ಮನೆ ಬದಲಾವಣೆ.. ಬೇಸತ್ತು ವಿಚ್ಛೇದನ ಕೊಡಲು ಮುಂದಾದ ಪತಿ..!

1 min read

ಜಿರಳೆ ಕಾಟಕ್ಕೆ… 3 ವರ್ಷದಲ್ಲಿ 18 ಬಾರಿ ಮನೆ ಬದಲಾವಣೆ.. ಬೇಸತ್ತು ವಿಚ್ಛೇದನ ಕೊಡಲು ಮುಂದಾದ ಪತಿ..!

ಮಧ್ಯಪ್ರದೇಶ : ಭೋಪಾಲ್ ನಲ್ಲಿ ದಂಪತಿಯೊಂದು ಜಿರಳೆ ಕಾಟದಿಂದ 3 ವರ್ಷದಲ್ಲಿ 18 ಬಾರಿ ಮನೆ ಬದಲಾಯಿಸಿದ್ದಾರೆ. ಪಕೊನೆಗೆ ಹೆಂಡತಿಯ ಜಿರಳೆ ಪೋಬಿಯಾ, ಆಕೆಯ ಮುಜುಗರ ತರಿಸುವ ವರ್ತನೆಯಿಂದ ವಬೇಸರಗೊಂಡ ಪತಿ ಆಕೆಗೆ ವಿಚ್ಛೇದನ ಕೊಡಲು ಮುಂದಾಗಿದ್ದಾನೆ.

ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಪತಿ ತನ್ನ ಪತ್ನಿಯ ಜಿರಳೆ ಭಯಕ್ಕೆ ಸ್ಪಂದಿಸಿ ಆಕೆಯ ಕೋರಿಕೆಯಂತೆ 18 ಬಾರಿ ಮನೆ ಬದಲಾಯಿಸಿದ್ದಾನೆ. ಆದರೆ ಈಗ ಸತತ ಮುಜುಗರಕ್ಕೊಳಗಾಗಿ ಆಕೆಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾನೆ. ಈ ಜೋಡಿ ಮದುವೆಯಾಗಿತ್ತು.

2017ರಲ್ಲಿ ಬಳಿಕ ಗಂಡನಿಗೆ ಹೆಂಡತಿಯ ಜಿರಳೆ ಫೋಬಿಯಾ ಬಗ್ಗೆ ಗೊತ್ತಾಗಿತ್ತು. ಒಂದು ದಿನ ಹೆಂಡತಿ ಅಡುಗೆ ಮನೆಯಲ್ಲಿ ಜಿರಳೆ ನೋಡಿದ ಬಳಿಕ ಕಿರುಚಿದ್ದಾಳೆ, ನಂತರ ಅವಳು ಅಡುಗೆ ಮನೆಗೆ ಪ್ರವೇಶಿಸಲು ನಿರಾಕರಿಸಿದಳು. ಮತ್ತು ಹೊಸ ಮನೆಗೆ ಸ್ಥಳಾಂತರಗೊಳ್ಳಬೇಕೆಂದು ಪಟ್ಟುಹಿಡಿದಳು. ದಂಪತಿ 2018 ರಲ್ಲಿ ಮೊದಲ ಬಾರಿಗೆ ತಮ್ಮ ಮನೆಯನ್ನು ಬದಲಾಯಿಸಿಕೊಂಡರು, ಅಂದಿನಿಂದ, ದಂಪತಿಗಳು 18 ಮನೆ ಬದಲಾಯಿಸಿದ್ದಾರೆ.

ಆ ಪತಿ ತನ್ನ ಹೆಂಡತಿಯನ್ನು ಮನೋವೈದ್ಯರ ಬಳಿಗೆ ಕರೆದೊಯ್ಯಲು ನಿರ್ಧರಿಸಿದ್ದ. ಅದರೆ ಔಷಧಿಯನ್ನು ತೆಗೆದುಕೊಳ್ಳಲು ಅವಳು ನಿರಾಕರಿಸಿದಳು. ಅಷ್ಟೇ ಅಲ್ಲದೆ ತನ್ನನ್ನು ಮಾನಸಿಕ ಅಸ್ವಸ್ಥೆ ಎಂದು ಘೋಷಿಸಲು ಪತಿ ಮುಂದಾಗಿದ್ದಾನೆ ಎಂದು ಆಕೆ ಆರೋಪಿಸಿದ್ದಾಳಂತೆ. ತನ್ನ ಹೆಂಡತಿ ಜಿರಳೆ ನೋಡಿದಾಗ ಜೋರಾಗಿ ಕಿರುಚುತ್ತಾ ಮನೆಯ ವಸ್ತುಗಳನ್ನು ರಸ್ತೆಗೆ ಹಾಕಲು ಪ್ರಾರಂಭಿಸುತ್ತಾಳೆ. ಇದರಿಂದ ಮುಜುಗರಕ್ಕೀಡಾಗಿರುವ ಪತಿ ಆಕೆಗೆ ವಿಚ್ಛೇದನ ಕೊಡುವ ನಿರ್ಧಾರ ಮಾಡಿದ್ದಾನೆ.

lock

ಹುಡುಗರಿಗೂ ಸೇಫ್ಟಿ ಇಲ್ಲ… ಸಲಿಂಗಿ ಕಾಮುಕನ ಟಾರ್ಚರ್ ಗೆ ವ್ಯಕ್ತಿ ಆತ್ಮಹತ್ಯೆ

ದೇಶದಲ್ಲಿ ಕೊರೊನಾ ಬ್ಲಾಸ್ಟ್ – ಒಂದೇ ದಿನ 2.34 ಲಕ್ಷ ಕೇಸ್ ಪತ್ತೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd