ಈ ಶಿಕ್ಷಕರ ಕಾರ್ಯಕ್ಕೊಂದು ಸಲಾಂ… ಬಡ ವಿದ್ಯಾರ್ಥಿಗಳಿಗಾಗಿ ಸ್ಕೂಟರ್ ಮೇಲೆ ಮಿನಿ ಶಾಲೆ ಓಪನ್..!
ಮಧ್ಯಪ್ರದೇಶ : ಮಧ್ಯಪ್ರದೇಶದ ಭೋಪಾಲ್ ನಲ್ಲಿ ಶಿಕ್ಷಕನ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚಿಗೆ ವ್ಯಕ್ತವಾಗ್ತಿದೆ. ಸರ್ಕಾರಿ ಶಿಕ್ಷಕನೋರ್ವ ತಮ್ಮ ಸ್ಕೂಟರ್ ನಲ್ಲಿ ಮಿನಿ ಸ್ಕೂಲ್, ಲೈಬ್ರರಿಯನ್ನು ನಿರ್ಮಿಸುವ ಮೂಲಕ ಬಡ ವಿದ್ಯಾರ್ಥಿಗಳ ಪಾಲಿನ ಹೀರೋ ಆಗಿದ್ದಾರೆ.
ಹೌದು, ಕೊರೊನಾ ಸಮಯದಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿರೋ ಪರಿಣಾಮ ವಿದ್ಯಾರ್ಥಿಗಳ ಗಮನ ಓದಿನ ಕಡೆಯೇ ಇರುಬೇಕು ಜೊತೆಗೆ ವಿದ್ಯಾಭದ್ಯಾಸದಿಂದ ವಂಚಿತರಾಗಬಾರದೆಂಬ ಕಾರಣದಿಂದ ಶಿಕ್ಷಕರೊಬ್ಬರು ಬೈಕ್ ಮೇಲೆಯೇ ಮಿನಿ ಸ್ಕೂಲ್ ಆರಂಭಿಸಿದ್ದಾರೆ. ಇವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದು, ಬಾರೀ ಮೆಚ್ಚುಗೆ ಗಳಿಸುತ್ತಿದೆ.
ಅಂದ್ಹಾಗೆ ಚಂದ್ರ ಶ್ರೀವಾಸ್ತವ್ ಎಂಬ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡಲು ತನ್ನ ಸ್ಕೂಟರ್ ಮೇಲೆ ಮಿನಿ ಸ್ಕೂಲ್ ಲೈಬ್ರರಿಯನ್ನು ತೆರೆದಿದ್ದಾರೆ. ಅಲ್ದೇ ಮರದ ಕೆಳಗೆ ಮಕ್ಕಳನ್ನು ಕೂರಿಸಿಕೊಂಡು ಮೈಕ್ ಬಳಸಿ ಓದಿಸುತ್ತಿದ್ದಾರೆ.
ಮಕ್ಕಳಿಗೆ ಪಾಠ ಹೇಳಿಕೊಡಲು ಸ್ಕೂಟರ್ ಮೇಲೆ ಒಂದು ಗ್ರೀನ್ ಕಲರ್ ಬೋರ್ಡ್ ನಿರ್ಮಿಸಲಾಗಿದ್ದು, ಮತ್ತೊಂದೆಡೆ ಪಠ್ಯಪುಸ್ತಕಗಳು ಮತ್ತು ಕೆಲವು ನೋಟ್ ಬುಕ್ಗಳನ್ನು ಇರಿಸಲಾಗಿದೆ. ಅಲ್ಲದೆ ಚಂದ್ರ ವಾಸ್ತವ್ ಮಕ್ಕಳಿಗೆ ಕೆಲವು ಪುಸ್ತಕಗಳನ್ನು ಉಚಿತವಾಗಿ ನೀಡಿದ್ದಾರೆ.
ಈ ವಿಚಾರವಾಗಿ ಶಿಕ್ಷಕ ಚಂದ್ರ ವಾಸ್ತವ್ ಹೆಚ್ಚಿನ ವಿದ್ಯಾರ್ಥಿಗಳು ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಅವರಿಗೆ ಸ್ಮಾರ್ಟ್ಫೋನ್ ತೆಗೆದುಕೊಳ್ಳಲಾಗದ ಕಾರಣ ಆನ್ಲೈನ್ ಶಿಕ್ಷಣ ಪಡೆಯಲಾಗುತ್ತಿಲ್ಲ. ಹಾಗಾಗಿ ನಾನು ಪಾಠ ತೆಗೆದುಕೊಳ್ಳುತ್ತಿದ್ದೆ ಎಂದಿದ್ದಾರೆ.
ಮಾ. 31ರ ಒಳಗಾಗಿ ಪ್ಯಾನ್ ಕಾರ್ಡ್ ಆಧಾರ್ ಲಿಂಕ್ ಮಾಡಿಸದೇ ಇದ್ದರೇ 1000 ರೂ. ದಂಡ..!
ಕೊರೋನಾ 2ನೇ ಅಲೆ – 8 ರಾಜ್ಯಗಳ ಪೈಕಿ ಮಹಾರಾಷ್ಟ್ರದ್ದೇ ಸಿಂಹಪಾಲು – ಕರ್ನಾಟಕಕ್ಕೆ 2ನೇ ಸ್ಥಾನ..!
ನೇಪಾಳಕ್ಕೆ ಭಾರತದ ನೆರವು – 1 ಲಕ್ಷ ಲಸಿಕೆ ಪೂರೈಕೆ..!
ಭಾರತದಲ್ಲಿ 5 ದಿನಗಳಲ್ಲೇ ಕೋಟಿ ಕೋಟಿ ಬಾಚಿದೆ ವಿದೇಶಿ ಸಿನಿಮಾ..! ಆದ್ರೂ ನಿರೀಕ್ಷೆಯ ಹುಸಿಯಾಗಿದೆ…!