ಕಳ್ಳತನ ಮಾಡಿ ಪತ್ರ ಬರೆದು ಕ್ಷಮೆ ಕೋರಿದ ಕಳ್ಳ

1 min read

ಕಳ್ಳತನ ಮಾಡಿ ಪತ್ರ ಬರೆದು ಕ್ಷಮೆ ಕೋರಿದ ಕಳ್ಳ

ಮಧ್ಯಪ್ರದೇಶ :  ಖದೀಮನೋರ್ವ ಪೊಲೀಸ್ ಅಧಿಕಾರಿಯ ಮನೆಯಲ್ಲಿ  ಕಳ್ಳತನ ಮಾಡಿ ಕ್ಷಮಾಪಣಾ ಪತ್ರ ಬರೆದಿಟ್ಟಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಭಿಂದ್ ನಗರದಲ್ಲಿ ನಡೆದಿದೆ.

ಕೊತ್ವಾಲ್ ಪೊಲೀಸ್ ಠಾಣೆಯ ASI  ಕಮಲೇಶ್ ಕಟಾರೆ ಎಂಬುವವರ   ನಿವಾಸದಲ್ಲಿ ಕಳ್ಳತನ ನಡೆದಿದೆ.. ಪೊಲೀಸ್ ಅಧಿಕಾರಿಯ  ಪತ್ನಿ ಮತ್ತು ಮಕ್ಕಳು ಜೂನ್ 30 ರಂದು ಸಂಬಂಧಿಕರ ಮನೆಗೆ ತೆರಳಿದ್ದರು.

ಮನೆಗೆ ಮರಳಿ ಬಂದಾಗ  ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ.. ಅಲ್ಲದೇ ಕಳ್ಳ ಬರೆದಿದ್ದ ಪತ್ರೆ ಸಿಕ್ಕಿದೆ.. ಆ ಪತ್ರದಲ್ಲಿ  ಕ್ಷಮಿಸಿ ಫ್ರೆಂಡ್, ಇದು ಅನಿವಾರ್ಯವಾಗಿತ್ತು. ನಾನು ಇದನ್ನು ಮಾಡದಿದ್ದರೆ, ನನ್ನ ಸ್ನೇಹಿತ  ಪ್ರಾಣ  ಕಳೆದುಕೊಳ್ಳುತ್ತಿದ್ದ. ಚಿಂತಿಸಬೇಡಿ, ನಾನು ಹಣ ಹೊಂದಿಸಿ ಕದ್ದ ಹಣವನ್ನು ಹಿಂದಿರುಗಿಸುತ್ತೇನೆ ಬರೆದಿದ್ದಾನೆ.

ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ.  ಕುಟುಂಬದ ಕೆಲವು ಪರಿಚಯಸ್ಥರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು,  ತನಿಖೆ ನಡೆಯುತ್ತಿದೆ.

ಜಗತ್ತಿನ ಅತಿ ಶಕ್ತಿಶಾಲಿ ಪಾಸ್ ​ಪೋರ್ಟ್ಗಳ  ಪಟ್ಟಿ ರಿಲೀಸ್ : ಭಾರತಕ್ಕೆ ಎಷ್ಟನೇ ಸ್ಥಾನ..?

ರಷ್ಯಾದಲ್ಲಿ ನಾಪತ್ತೆಯಾಗಿದ್ದ ವಿಮಾನ ಪತನ – ಮೃತದೇಹಗಳು ಪತ್ತೆ

ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯಿಸ್ ಬರ್ಬರ ಹತ್ಯೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd