ಮಾಹಾರಾಷ್ಟ್ರದಲ್ಲಿ ಧಾರಾಕಾರ ಮಳೆ : ಪ್ರವಾಹ – ಜನರ ಜೀವನ ಸಂಪೂರ್ಣ ಅಸ್ತವ್ಯಸ್ತ

1 min read

ಮಾಹಾರಾಷ್ಟ್ರದಲ್ಲಿ ಧಾರಾಕಾರ ಮಳೆ : ಪ್ರವಾಹ – ಜನರ ಜೀವನ ಸಂಪೂರ್ಣ ಅಸ್ತವ್ಯಸ್ತ

ಮುಂಬೈ : ನೆರೆಯ ಮಾಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗ್ತಾಯಿದ್ದು, ಜನರ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.. ಮಹಾರಾಷ್ಟ್ರಕ್ಕೆ ಒಂದು ರೀತಿ ಮಳೆ ಹಾಗೂ ಕೊರೊನಾ ಶಾಪವಾಗಿದ್ದು, ಮಳೆಯ ಪ್ರಬಾವೂ ಇಲ್ಲಿಯೇ ಹೆಚ್ಚಾಗಿ ಬೀರಿದ್ರೆ , ಕೊರೊನಾ ಪರಿಣಾಮವನ್ನ ಹೆಚ್ಚಾಗಿ ಅನುಭವಿಸಿದ ರಾಜ್ಯವೂ ಇದೇ ಆಗಿದೆ..

ಮಹಾರಾಷ್ಟ್ರದಲ್ಲಿ ವರುಣನ ಅಬ್ಬರಕ್ಕೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.. ಆದ್ರೆ ವರುಣ ಮಾತ್ರ ಶಾಂತನಾಗುವ ಲಕ್ಷಣ ಕಾಣುತ್ತಿಲ್ಲ.. ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.. ರಸ್ತೆಗಳು ಕೆರೆಯಂತೆ ಮಾರ್ಪಾಡಾಗಿವೆ.. ಅಲ್ಲಲ್ಲೆ ಗೋಡೆ ಕುಸಿತ ಭೂಮಿ ಕುಸಿತದಿಂದಾಗಿ ಹಲವರ ಜೀವ ಹೋಗಿದೆ.. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಮುಂಬೈನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ..

 ಮುಂಬೈ, ಥಾಣೆ, ಪಾಲ್ಘರ್ ಮತ್ತು ರಾಯಗಢ್‍ ದಲ್ಲಿ ಬಿಡುವಿಲ್ಲದೇ ನಿರಂತರವಾಗಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಐಎಂಡಿಯ ಪ್ರಾದೇಶಿಕ ಹವಮಾನ ಕೇಂದ್ರವು ಮುಂಬೈನಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಿದೆ. ಬುಧವಾರ ಅತೀ ಹೆಚ್ಚು ಮಳೆಯಾಗಿದ್ದರು ರಸ್ತೆ ಮತ್ತು ರೈಲು ಸಂಚಾರಕ್ಕೆ ಮಳೆಯಿಂದಾಗಿ ಯಾವುದೇ ತೊಂದರೆಯುಂಟಾಗಿಲ್ಲ. ಭಾನುವಾರ ಮತ್ತು ಸೋಮವಾರ ಹೆಚ್ಚಾಗಿ ಸುರಿದ ಮಳೆ, ಬುಧವಾರ ಮಧ್ಯಾಹ್ನ ಕೊಂಚ ಕಡಿಮೆಯಾಗಿತ್ತು. ಆದರೆ ಮತ್ತೆ ರಾತ್ರಿ ಇಡೀ ಮಳೆ ಧಾರಕಾರವಾಗಿ ಸುರಿದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.

ಗುಜರಾತ್‍ನ ಕರಾವಳಿಯಿಂದ ಕರ್ನಾಟಕದ ತೀರದವರೆಗೂ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲಿಯೂ ಮುಂಬೈನಲ್ಲಿ ಕೆಲವು ದಿನಗಳ ಕಾಲ ಗಾಳಿ ಸಹಿತ ಭಾರೀ ಮಳೆಯಾಗಲಿದ್ದು, ಕೊಂಕಣ, ಗೋವಾ ಮತ್ತು ಮಧ್ಯ ಮಹಾರಾಷ್ಟ್ರ, ಬೆಟ್ಟಗಾಡು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಳಗಾವಿಯಲ್ಲಿ ಭಾರಿ ಮಳೆ : ಮನೆ ಕುಸಿತ

ಮಹಾರಾಷ್ಟ್ರದಲ್ಲಿ ‘ಮಹಾ’ ಮಳೆ : ಪ್ರವಾಹ – ರೈಲುಗಳಲ್ಲಿ ಸಿಲುಕಿ 6,000 ಪ್ರಯಾಣಿಕರ ಪರದಾಟ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd