ಮಜಾಭಾರತ’ (Majabharatha)ದಲ್ಲಿ ಕಚಗುಳಿ ನೀಡುತ್ತಿದ್ದ ಕಿಲಾಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸುಶ್ಮಿತಾ (Sushmitha) ಹಾಗೂ ಜಗಪ್ಪ (Jagappa) ಮದುವೆಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಹಲವಾರು ವರ್ಷಗಳಿಂದಲೂ ಪ್ರೀತಿ ಮಾಡುತ್ತಿತ್ತು. ಸದ್ಯ ಈ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಈ ಮದುವೆಗೆ ಕಿರುತೆರೆ ಹಾಗೂ ಹಿರಿತೆರೆಯ ನಟ- ನಟಿಯರು ಆಗಮಿಸಿದ್ದರು.
ಸಿಲಿಕಾನ್ ಸಿಟಿಯ ಜೆಪಿ ನಗರದಲ್ಲಿರುವ ಸಿಂಧೂರ ಕನ್ವೆಷನ್ ಹಾಲ್ ನಲ್ಲಿಯೇ ಅದ್ದೂರಿಯಾಗಿ ಮದುವೆ ನಡೆಯಿತು. ಈ ರವಿಚಂದ್ರನ್, ಪ್ರಜ್ವಲ್ ದೇವರಾಜ್, ಸಿತಾರಾ, ನಿರಂಜನ್ ದೇಶಪಾಂಡೆ ದಂಪತಿ, ಮಂಜು ಪಾವಗಡ ಸೇರಿದಂತೆ ಹಲವಾರು ಕಲಾವಿದರು ಆಗಮಿಸಿದ್ದರು. ‘ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ಈ ಜೋಡಿ ಭಾಗಿಯಾಗಿ ಸಾಕಷ್ಟು ಹೆಸರು ಮಾಡಿತ್ತು. ಅಭಿಮಾನಿಗಳು ಕೂಡ ಈ ಜೋಡಿಗೆ ಶುಭ ಕೋರುತ್ತಿದ್ದಾರೆ.