ನವದೆಹಲಿ: ನಕಲಿ ಕೀಮೋಥೆರಪಿ ಔಷಧ ತಯಾರಿಸಿ ಮಾರಾಟ ಮಾಡುತ್ತಿದ್ದ 7 ಜನ ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿಫಿಲ್ ಜೈನ್ (46), ಸೂರಜ್ ಶಾತ್ (28), ನೀರಜ್ ಚೌಹಾಣ್ (38), ಪರ್ವೇಜ್ (33), ಕೋಮಲ್ ತಿವಾರಿ (39), ಅಭಿನಯ್ ಕೊಹ್ಲಿ (30) ಮತ್ತು ತುಷಾರ್ ಚೌಹಾಣ್ (28) ಎಂದು ಗುರುತಿಸಲಾಗಿದೆ. ನಕಲಿ ಕ್ಯಾನ್ಸರ್ ಔಷಧಿ ತಯಾರಿಕೆ ಮತ್ತು ಪೂರೈಕೆಯಲ್ಲಿ ತೊಡಗಿರುವ ದಂಧೆಯ ಕುರಿತು ಖಚಿತ ಮಾಹಿತಿ ಸಿಕ್ಕ ನಂತರ ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸರು, ಮೋತಿ ನಗರದಲ್ಲಿ ಎರಡು ಫ್ಲಾಟ್ಗಳು, ಗುಗಾರ್ಂವ್ನ ದಕ್ಷಿಣ ನಗರದಲ್ಲಿ ಒಂದು ಫ್ಲಾಟ್, ಈಶಾನ್ಯ ದೆಹಲಿಯ ಯಮುನಾ ವಿಹಾರ್ನಲ್ಲಿರುವ ಒಂದು ಫ್ಲಾಟ್ ಹಾಗೂ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ ಸೇರಿ ನಾಲ್ಕು ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಸಲಾಗಿತ್ತು. ಆರೋಪಿಗಳಲ್ಲಿನ ಕೆಲವರು ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.