ಮಲೆ ಮಹದೇಶ್ವರನ ಭಕ್ತಾಧಿಗಳಿಗೆ ನಿರಾಸೆ : 5 ದಿನ ಭಕ್ತರಿಗಿಲ್ಲ ಪ್ರವೇಶ..!

1 min read

ಮಲೆ ಮಹದೇಶ್ವರನ ಭಕ್ತಾಧಿಗಳಿಗೆ ನಿರಾಸೆ : 5 ದಿನ ಭಕ್ತರಿಗಿಲ್ಲ ಪ್ರವೇಶ..!

ಚಾಮರಾಜನಗರ : ಚಾಮರಾಜನಗರದಲ್ಲಿನ ಐತಿಹಾಸಿಕ ಮಲೆ ಮಹದೇಶ್ವರ ಬೆಟ್ಟದಲ್ಲಿ 5 ದಿನಗಳ ವರೆಗೂ ಭಕ್ತರ ಪ್ರವೇಶವನ್ನ ನಿರ್ಬಂಧಿಸಲಾಗಿದೆ. ಗುರುವಾರ ಶಿವರಾತ್ರಿ ಹಬ್ಬವಿರುವುದರಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನ ಪಡೆಯಲು ಜನಸಾಗರವೇ ಹರಿದು ಬರುತ್ತದೆ. ಆದ್ರೆ ಈ ಬಾರಿ ಕೊರೊನಾ ಹಾವಳಿ ಇದ್ದು, ಮತ್ತೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮಾರ್ಚ್ 9 ರಿಂದ 14 ರವರೆಗೆ ಶಿವರಾತ್ರಿ ಜಾತ್ರೆಗೆ ನಿಷೇಧ ಹೇರಲಾಗಿದೆ. ಅದು ಅಲ್ಲದೇ ಮಲೆ ಮಹದೇಶ್ವರನ ದರ್ಶನಕ್ಕೆ ಗಡಿ ರಾಜ್ಯಗಳಿಂದ ಅದ್ರಲ್ಲೂ ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆದ್ರೆ ಕೇರಳದಲ್ಲಿ ಸೋಂಕಿನ ಪ್ರಕರಣಗಳು ತೀವ್ರಗೊಳ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನದ ಆಡಳಿತ ಮಂಡಳಿ ಭಕ್ತರ ಪ್ರವೇಶವನ್ನ ನಿಷೇಧಿಸಿದೆ.

Bigg Boss 8 : ಮೊದಲ ವಾರವೇ ದೊಡ್ಮನೆಗೆ ವಿದಾಯ ಹೇಳಿದ ಧನುಶ್ರೀ..!

ಹೊರಗಿನಿಂದ ಬೆಟ್ಟಕ್ಕೆ ಬರುವ ಭಕ್ತರಿಗೂ, ಕಾಲ್ನಡಿಗೆಯಿಂದ ಬರುವ ಭಕ್ತರಿಗೂ ಬೆಟ್ಟಕ್ಕೆ ಪ್ರವೇಶ ನಿಷೇಧಸಿಲಾಗಿದೆ ಎಂಬುವುದರ ಬಗ್ಗೆ ಈಗಾಗಲೇ ಜಿಲ್ಲಾಡಳಿತ, ಪ್ರಾಧಿಕಾರ ಆದೇಶ ಹೊರಡಿಸಿದೆ. ಭಾನುವಾರ ಚಿನ್ನದ ರಥದ ಸೇವೆ ಮಾಡಲು ಬೆಟ್ಟದಲ್ಲಿ ಮಾದಪ್ಪನ ಭಕ್ತರು ಮುಗಿ ಬಿದ್ದಿದ್ದರು. ಅಲ್ಲದೆ ನಿನ್ನೆ ಒಂದೇ ದಿನ ವಿವಿಧ ಸೇವೆಗಳಿಂದ ದೇವಾಲಯಕ್ಕೆ 9,22,024 ರೂ. ಹಣ ಸಂಗ್ರಹವಾಗಿದೆ. ಕೊರೊನಾ ಕಾರಣದಿಂದ ಈ ಬಾರಿಯ ಮಹಾಶಿವರಾತ್ರಿ ಹಬ್ಬವನ್ನು ಸರಳ ಹಾಗೂ ಸಂಪ್ರದಾಯಕವಾಗಿ ಆಚರಣೆ ಮಾಡಲಾಗುತ್ತಿದ್ದು, ಐದು ದಿನಗಳ ಕಾಲ ಬೆಟ್ಟದಲ್ಲಿ ವಾಸ ಮಾಡುವ ನಿವಾಸಿಗಳಿಗೆ ಮಾತ್ರ ಮಾದಪ್ಪನ ದರ್ಶನ ದೊರೆಯಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd