ಡೌನ್ ಸಿಂಡ್ರೋಮ್‌ನ 22 ತಿಂಗಳ ಮಗುವನ್ನು ದತ್ತು ಪಡೆದು ತಾಯಿಯಂತೆ ಆರೈಕೆ ಮಾಡಿ ಬೆಳೆಸುತ್ತಿರುವ ಆದಿತ್ಯ ತಿವಾರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದಂದು ವಿಶ್ವದ ಅತ್ಯುತ್ತಮ ತಾಯಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಾರ್ಚ್ 8ರಂದು ಬೆಂಗಳೂರಿನಲ್ಲಿ ನಡೆದ ವಿಶ್ವ ಮಹಿಳಾ ದಿನ ಕಾರ್ಯಕ್ರಮದಲ್ಲಿ ಅವರಿಗೆ ವಿಶ್ವದ ಅತ್ಯುತ್ತಮ ತಾಯಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೂಲತಃ ಪುಣೆಯವರಾದ ಆದಿತ್ಯ ತಿವಾರಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದರು. ಈ ಮಗುವನ್ನು ದತ್ತು ತೆಗೆದುಕೊಂಡ ನಂತರ ತಮ್ಮ ಹುದ್ದೆಯನ್ನು ತ್ಯಜಿಸಿ, ಪೋಷಕರಿಗೆ ಕೌನ್ಸಿಲಿಂಗ್ ಸೇರಿದಂತೆ ಇನ್ನಿತರ ಕಾರ್ಯಾಗಾರವನ್ನು ನಡೆಸುತ್ತಿದ್ದಾರೆ.
2016ರಲ್ಲಿ ಮಗುವನ್ನು ದತ್ತು ಪಡೆದುಕೊಂಡಿರುವ ಸಿಂಗಲ್ ಪೇರೆಂಟ್ ಆದಿತ್ಯ ತಿವಾರಿ ಅವರ ಕೆಲಸಕ್ಕೆ ದೇಶ ವಿದೇಶಗಳಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.
ಇದೀಗ ಆದಿತ್ಯಗೆ ‘ವಲ್ಡ್ಸ್ ಬೆಸ್ಟ್ ಮಮ್ಮಿ ಅವಾರ್ಡ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು, ಜಿನೀವಾದ ವಿಶ್ವ ಅರ್ಥಿಕ ಶೃಂಗಸಭೆಗೂ ಇವರನ್ನು ಆಹ್ವಾನಿಸಲಾಗಿದೆ.
ನಿಮ್ಮ ದಾನ ಬೇಡ, ವಿನಾಶಕ್ಕೆ ಪರಿಹಾರ ನೀಡಿ: ನಮಗೆ ನ್ಯಾಯ ಬೇಕು ಭಾರತದ ವಿರುದ್ಧ ಸಿಡಿದೆದ್ದ ನೇಪಾಳ
ಕಾಠ್ಮಂಡು: ಇತ್ತೀಚಿನ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ನಲುಗಿ ಹೋಗಿರುವ ನೇಪಾಳ, ಇದೀಗ ಜಗತ್ತಿನ ಬಲಿಷ್ಠ ರಾಷ್ಟ್ರಗಳ ವಿರುದ್ಧ ತಿರುಗಿಬಿದ್ದಿದೆ. ಸಾವಿರಾರು ಜೀವಗಳನ್ನು ಬಲಿಪಡೆದ ಈ ನೈಸರ್ಗಿಕ...








