“ಮಹಿಳಾ ಪತ್ರಕರ್ತೆಯರಿಂದ ತುಂಬಾ ಕಾಟ ಅನುಭವಿಸಿದ್ದೆ” : ಮಲ್ಲಿಕಾ ಶರಾವತ್

1 min read

“ಮಹಿಳಾ ಪತ್ರಕರ್ತೆಯರಿಂದ ತುಂಬಾ ಕಾಟ ಅನುಭವಿಸಿದ್ದೆ” : ಮಲ್ಲಿಕಾ ಶರಾವತ್

ಬಾಲಿವುಡ್ ನ ಸಖತ್ ಬೋಲ್ಡ್ ಮತ್ತು ಹಾಟ್ ನಟಿಯಂದೇ ಗುರುತಿಸಿಕೊಂಡಿರುವ ಗ್ಲಾಮರಸ್ ಬೆಡಗಿ ಮಲ್ಲಿಕಾ ಶರಾವತ್ ಬಗ್ಗೆ ಬಹುಶಃ ಗೊತ್ತಿಲ್ಲದವರೂ ಯಾರೂ ಇಲ್ಲ.. ಸಾಲು ಸಾಲು ಸಿನಿಮಾಗಳಲ್ಲಿ ಬೋಲ್ಡ್ ಪಾತ್ರಗಳ ಮೂಲಕವೇ ಮಿಂಚಿ ಯಶಸ್ಸಿನ ಉತ್ತುಂಗಕ್ಕೇರಿದ್ದ ಮಲ್ಲಿಕಾ ಶರಾವತ್ ಸದ್ಯ ಈಗ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ತಿರುವುದು ತೀರ ಕಡಿಮೆಯಾಗಿಬಿಟ್ಟಿದೆ. ಕೆಲವೊಂದು ಶೋಗಳಲ್ಲಿ ಮಾತ್ರ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ತಿರುವ ಮಲ್ಲಿಕಾಗೆ ಹಿಂದೊಮ್ಮೆ ಮಾಧ್ಯಮದವರು ಸಿಕ್ಕಾಪಟ್ಟೆ ಕಾಟ ಕಕೊಟ್ಟಿದ್ದರು ಎಂದು ನಟಿ ಇತ್ತೀಚೆಗೆ ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದಾರೆ.

ಹೌದು ನಾನು ನಟಿಸುತ್ತಿದ್ದ ಸಮಯದಲ್ಲಿ ಕೆಲವು ಮಾಧ್ಯಮದವರು ನನಗೆ ಬಹಳ ಕಾಟ ಕೊಟ್ಟರು. ಅದರಲ್ಲೂ ಮಹಿಳಾ ಪತ್ರಕರ್ತರು ನನ್ನ ವಿರುದ್ಧ ಬಹಳ ಟೀಕೆ ಮಾಡಿದರು. ಈಕೆ ಈ ರೀತಿಯಾಗೆಲ್ಲಾ ಸೀನ್ ಗಳಲ್ಲಿ ಕಾಣಿಸಿಕೊಳ್ತಾರೆ. ಲಿಪ್ ಲಾಕ್ ಮಾಡುತ್ತಾಳೆ. ಮರ್ಯಾದೆ ಬಿಟ್‍ಟ ಹೆಣ್ಣು, ಸಂಪ್ರದಾಯವವಿಲ್ಲದವಳು, ಇವಳ ಸಿನಿಮಾದಿಂದ ಯುವಕರು ಹಾಳಾಗ್ತಾರೆ ಎಂದೆಲ್ಲಾ ಟೀಕೆ ಮಾಡಿ ಪ್ರಸಾರ ಮಾಡಿದ್ದರು ಎಂದು ಬೇಸರ ಹೊರಹಾಕಿದ್ದಾರೆ. ಅಷ್ಟೇ ಅಲ್ಲ ಒಬ್ಬ ಮಾಧ್ಯಮದವರಂತೂ ನನ್ನನ್ನು ಪಾರ್ನ್ ಸ್ಟಾರ್ ಎಂದೇ ಬರೆದಿದ್ದರು. ಅವರ ಹೆಸರು ಹೇಳಲು ನನಗೆ ಇಷ್ಟವಿಲ್ಲ. ನನಗೆ ಪಾರ್ನ್ ಉದ್ಯಮದಲ್ಲಿರುವವರ ಬಗ್ಗೆ ಬೇಸರವಿಲ್ಲ. ಆದರೆ ನಾನು ಆ ಉದ್ಯಮಕ್ಕೆ ಸೇರಿದವಳಾಗಿರಲಿಲ್ಲ. ಆದರೂ ನನ್ನನ್ನು ಅಪಮಾನ ಮಾಡಬೇಕೆಂಬ ಉದ್ದೇಶದಿಂದ ಹಾಗೆ ಬರೆಯಲಾಗಿತ್ತು. ಇದು ತುಂಬಾ ಬೇಸರ ಮೂಡಿಸಿತ್ತು ಎಂದಿದ್ದಾರೆ.

ಇನ್ನೂ ವಿದೇಶಕ್ಕೆ ತೆರಳಿದ್ದಕ್ಕೂ ಇದೇ ಕಾರಣ ಎಂದಿದ್ದಾರೆ ಮಲ್ಲಿಕಾ. ಇದೇ ವೇಳೆ ಪುರುಷ ಮಾಧ್ಯಮದವರ ಬಗ್ಗೆಯೂ ಮಾತನಾಡಿರೋ ನಟಿ ನನ್ನ ಬಗ್ಗೆ ಪುರುಷ ಮಾಧ್ಯಮದವರು ಯಾವತ್ತೂ ಕೂಡ ತಪ್ಪಾಗಿ ಬರೆಯಲಿಲ್ಲ. ನನ್ನ ಬಗ್ಗೆ ಕೆಟ್ಟದಾಗಿ ಬರೆದಿದ್ದು ಮಹಿಳಾ ಜರ್ನಲಿಸ್ಟ್‌ಗಳೇ. ನಾನು ನಟಿಸಲು ಆರಂಭಿಸಿದ ಸಂದರ್ಭದಲ್ಲಿ ಗ್ಲಾಮರಸ್‌ಆಗಿ ಕಾಣಿಸಿಕೊಳ್ಳುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಅದು ಸಾಮಾನ್ಯ ಎಂಬಂತಾಗಿದೆ. ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿದ್ದಾರೆ ಎಂದು ತಾವು ಅನುಭವಿಸಿದ ಕೆಟ್ಟ ದಿನಗಳನ್ನ ನೆನೆದಿದ್ದಾರೆ. ವಿದೇಶದಿಂದ ಭಾರತಕ್ಕೆ ಮರಳಿರುವ ಮಲ್ಲಿಕಾ ಸದ್ಯ ನಕಾಬ್ ವೆಬ್ ಸರಣಿಯಲ್ಲಿ ನನಟಿಸುತ್ತಿದ್ದಾರೆ.

ಹೊಸ ರಿಯಾಲಿಟಿ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd