Mallikarjun Kharge | ಇದು ಪಾರ್ಟ್ ಟೈಮ್ ಜಾಬ್ ಅಲ್ಲ, ಫುಲ್ ಟೈಮ್ಸ್ ಜಾಬ್
ನವದೆಹಲಿ : ಇದು ಪಾರ್ಟ್ ಟೈಮ್ ಜಾಬ್ ಅಲ್ಲ, ಫುಲ್ ಟೈಮ್ಸ್ ಜಾಬ್. ನಾನು ಯಾವಾಗಲೂ ಫುಲ್ ಟೈಮ್ ಕೆಲಸ ಮಾಡಿದ್ದೇನೆ.
ಯಾವಾಗಲೂ ಹೃದಯದಿಂದ ಕೆಲಸ ಮಾಡಿದ್ದೇನೆ ಎಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಕೆ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಖರ್ಗೆ, ನಾನು ಕೆಪಿಸಿಸಿಗೂ ಕೂಡ ಅಧ್ಯಕ್ಷ ಆಗಿದ್ದೆ.
ಬಾಲ್ಯದಿಂದ ಈತನಕ ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈಗಲೂ ನಾನು ಹೋರಾಟ ಮಾಡುತ್ತೇನೆ.
ಕರ್ನಾಟಕದಲ್ಲಿ ವಿಪಕ್ಷ ನಾಯಕ, ಬಹುತೇಕ ಎಲ್ಲಾ ಸಚಿವ ಸ್ಥಾನಗಳನ್ನು ಕೂಡ ಅಲಂಕರಿಸಿದ್ದೇನೆ.
ಕೇಂದ್ರದಲ್ಲೂ ಕೂಡ ಸಚಿವನಾಗಿ, ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ಇದು ಪಾರ್ಟ್ ಟೈಮ್ ಜಾಬ್ ಅಲ್ಲ, ಫುಲ್ ಟೈಮ್ಸ್ ಜಾಬ್.

ನಾನು ಯಾವಾಗಲೂ ಫುಲ್ ಟೈಮ್ ಕೆಲಸ ಮಾಡಿದ್ದೇನೆ. ಯಾವಾಗಲೂ ಹೃದಯದಿಂದ ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ ಮಾತನಾಡಿದ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದರು.
ಹೀಗಾಗಿ ನನಗೆ ಸ್ಪರ್ಧಿಸುವಂತೆ ಅನೇಕರು ಒತ್ತಾಯಿಸಿದ್ರು. ಆದ್ದರಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ.
ಪಕ್ಷದ ಸಿದ್ಧಾಂತ, ವಿಚಾರಧಾರೆ ಮುಂದಿಟ್ಟುಕೊಂಡು ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಪಕ್ಷದ ಎಲ್ಲರೂ ಸಹಕಾರ ಕೂಡ ಬೇಕು ಎಂದು ಮನವಿ ಮಾಡಿದ್ದಾರೆ.