ಕೋಲ್ಕತ್ತಾ: ಬಿಜೆಪಿಗೆ ಮತ ಹಾಕಿದರೆ ಮಮತಾ ಬ್ಯಾನರ್ಜಿ ಗೂಂಡಾಗಳನ್ನು ತಲೆ ಕೆಳಗಾಗಿ ನೇತು ಹಾಕುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಯ್ ಗಂಜ್ ನ ಬಿಜೆಪಿ ಅಬ್ಯರ್ಥಿ ಪರ ಮತಯಾಚನೆ ನಡೆಸಿದ ಅವರು, ದೀದಿ ಮಾ, ಮಾತಿ, ಮಾನುಷ್ ಘೋಷಣೆಯ ಮೇಲೆ ಅಧಿಕಾರದ ಗದ್ದುಗೆ ಏರಿದರು. ಆದರೆ, ಸಂದೇಶ ಖಾಲಿಯಲ್ಲಿ ಮಾತೆಯರನ್ನು ಹಿಂಸಿಸಿದರು. ಅವರು ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಗೂಂಡಾಗಳ ಅಟ್ಟಹಾಸ ಬಂಗಾಳದಲ್ಲಿ ಹೆಚ್ಚಾಗಿದೆ. ಹೀಗಾಗಿ ಬಿಜೆಪಿಗೆ ಮತ ನೀಡಿ, ಗೂಂಡಾಗಳನ್ನು ಮಟ್ಟ ಹಾಕುತ್ತೇವೆ ಎಂದು ಹೇಳಿದ್ದಾರೆ.
ಕಲೆದ ಬಾರಿ 18 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ 35 ಸೀಟು ನೀಡಿ ಎಂದು ಮನವಿ ಮಾಡಿದ್ದಾರೆ. ಸಂದೇಶಖಾಲಿಯಲ್ಲಿ ಮಮತಾ ಬ್ಯಾನರ್ಜಿ ಅವರು ತಮ್ಮ ಮತಬ್ಯಾಂಕ್ಗೆ ಧಕ್ಕೆಯಾಗದಂತೆ ಮಹಿಳೆಯರಿಗೆ ಚಿತ್ರಹಿಂಸೆ ನೀಡಲು ಅವಕಾಶ ನೀಡಿದ್ದರು. ಟಿಎಂಸಿ ನಾಯಕರು ಹುಲ್ಲಿನ ಛಾವಣಿಯ ಮನೆಗಳಲ್ಲಿ ಇದ್ದವರು ಈಗ ನಾಲ್ಕು ಅಂತಸ್ತಿನ ಮನೆಗಳನ್ನು ಹೊಂದಿದ್ದಾರೆ. ಕಾರುಗಳಲ್ಲಿ ತಿರುಗುತ್ತಾರೆ. ಇದೆಲ್ಲ ನಿಮ್ಮ ಹಣ. ಇವರ ಭ್ರಷ್ಟಾಚಾರ ತೊಲಗಿಸಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.