1 ರುಪಾಯಿ ನಾಣ್ಯಗಳನ್ನ ಕೊಟ್ಟು 2.60 ಲಕ್ಷದ ಬೈಕ್  ಖರೀದಿಸಿದ ಯುವಕ

1 min read

1 ರುಪಾಯಿ ನಾಣ್ಯಗಳನ್ನ ಕೊಟ್ಟು 2.60 ಲಕ್ಷದ ಬೈಕ್  ಖರೀದಿಸಿದ ಯುವಕ

ಹೀಗೆ ನಾಣ್ಯಗಳನ್ನೆಲ್ಲ ಗುಡ್ಡೆ ಹಾಕಿ ಎಣಿಸುತ್ತಿರುವುದನ್ನು ನೋಡಿದರೆ, ಯಾವುದೋ ದೇವಸ್ಥಾನದ ಹುಂಡಿಯನ್ನ ಓಪನ್  ಮಾಡಿ ಹಣ ಎಣಿಸುತ್ತಿದ್ದಾರೆ ಅಂತ ಅಂದುಕೊಳ್ಳಬೇಡಿ ಈ ನಾಣ್ಯಗಳ ಸಂಗ್ರಹಣೆ  ಹಿಂದೆ ಒಂದು ಇಂಟ್ರಸ್ಟಿಂಗ್‌ ಕಥೆ ಇದೆ.  ಅದಕ್ಕೂ ಮುಂಚೆ ಈ ಬೈಕ್ ಮೇಲೆ ಕುಳಿತಿರುವ  ಈ  ಯುವಕ ನ ಫೊಟೋ  ನೋಡಿ,  ಈ ಯುವಕನೇ  ಈ ನಾಣ್ಯದ ಕತೆ ಹಿಂದಿರೋ ಕ್ಯಾರೆಕ್ಟರ್‌.  ಹೆಸ್ರು ವಿ ಭೂಪತಿ ಅಂತ. ತಮಿಳುನಾಡಿನ ಸೇಲಂ ಜಿಲ್ಲೆಯ ಅಮ್ಮಾಪೇಟ್‌ನ ನಿವಾಸಿ. ವಯಸ್ಸು ಮೂವತ್ತು  ದಾಟೋಕೆ ಇನ್ನೊಂದು ವರ್ಷ ಬಾಕಿ ಇದೆ.

ಈ ನಾಣ್ಯಗಳನ್ನೆಲ್ಲಾ ಯಾಕೆ ಸಂಗ್ರಹಣೆ ಮಾಡ್ತಿದ್ದ ಅನ್ನೋ ಸ್ಟೋರಿನ ನಾವು ಹೇಳ್ತಿವಿ. ಯುವಕರು ಎಂದ ಮೇಲೆ ಬೈಕ್ ಕ್ರೇಜ್ ಇದ್ದೇ ಇರುತ್ತೆ, ಎಷ್ಟೋ ಹುಡುಗರಿಗೆ ಸೂಪರ್ ಬೈಕ್ ಗಳ ಮೇಲೆ ಕ್ರಷ್ ಆಗಿರುತ್ತೆ.   ಈ ಯುವಕನಿಗೂ ಇದೇ ಥರ ದು ಬೈಕ್ ತೆಗೆದುಕೊಳ್ಳಬೇಕು ಅಂತ ಕನಸಿತ್ತು. ಆ ಕನಸನ್ನ ಬೆಂಬತ್ತಲು ಶುರು ಮಾಡಿದಾಗ ಹೊರಟಿದ್ದೆ ಈ ರುಪಾಯಿಗಳನ್ನ ಸಂಗ್ರಹ ಮಾಡಲಿಕ್ಕೆ.   ಬಜಾಜ್‌ ಕಂಪನಿಯ ಡೊಮಿನೋರ್‌ ಬೈಕನ್ನು ಖರೀದಿ ಮಾಡಬೇಕು ಎನ್ನುವುದು ಈ  ಯುವಕನ  ಕನಸಾಗಿತ್ತು. ಎರಡು ವರ್ಷಗಳ ಹಿಂದೆ ಬೈಕ್‌ ರೇಟು ವಿಚಾರಿಸಿದಾಗ 2 ಲಕ್ಷ ಇತ್ತು. ಕೈಯಲ್ಲಿ ಕೊಂಡುಕೊಳ್ಳುವಷ್ಟು ಕಾಸು ಇರಲಿಲ್ಲ.  ಹೀಗಾಗಿ ಅಂದಿನಿಂದಲೇ ಬೈಕ್‌ ಕೊಳ್ಳಲು ಒಂದೊಂದು ಪೈಸೆ ಪೈಸೆ ಕೂಡಿ ಹಾಕೋದಕ್ಕೆ ಶುರು ಮಾಡಿದ.

ಯುವಕ ಬಿ ಸಿ ಎ ಪದವಿಧರನಾಗಿದ್ದು  ಸ್ವತಃ ಒಂದು  ಯೂಟ್ಯೂಬ್  ಚಾನೆಲ್ ಓಪನ್ ಮಾಡಿಕೊ0ಡು ಕಾಸು ಮಾಡುತ್ತಿದ್ದಾನೆ. ಇದಕ್ಕೂ ಮೊದಲು ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಯೂಟ್ಯೂಬ್‌ ಚಾನೆಲ್‌ ನಿಂದಲೂ ಅಲ್ಲ ಸ್ವಲ್ಪ ಕಾಸು ಕೈಸೇರಿತು. ಸಿಗುವ ಸಂಬಳದಿಂದ ಅಲ್ಪ ಸ್ವಲ್ಪ ಉಳಿತಾಯ ಮಾಡ್ತಿದ್ದ. ಹನಿ ಹನಿ ಗೂಡಿದರೆ ಹಳ್ಳ ಎನ್ನುವ ಹಾಗೆ ಅನ್ನೋ ಹಾಗೆ ಬೈಕ್‌ ಖರೀದಿಸಲು ಬೇಕಾದ ಹಣವನ್ನ ಜೊಡಿಸಿಕೊಂಡು ಬಿಟ್ಟ. ಇದಕ್ಕೆ ತಗುಲಿದ್ದು ಬರೋಬ್ಬರಿ ಮೂರೂ ವರ್ಷ

ಇದೀಗ 2.60 ಲಕ್ಷ ಕೊಟ್ಟು ಡೊಮಿನಾರ್‌ ಬೈಕನ್ನು ಕೊಂಡುಕೊಂಡಿದ್ದಾನೆ.  ಅರೆ ಅದರೆಲ್ಲೇನು ವಿಶೇಷ ಅಂತ ನಿಮಗೆ ಅನಿಸಬಹುದು. ಈ ಗುಡ್ಡೆ ಹಾಕಿರೋ ಕಾಯ್ನ್‌ಗಳೇ ಬೈಕ್‌ ಖರೀದಿ ಹಿಂದಿರೋ ವಿಶೇಷ. ಅಂದಹಾಗೆ ವಿ ಭೂಪತಿ ಬೈಕ್‌ ತನ್ನದಾಗಿಸಿಕೊಳ್ಳಲು ಬೇಕಾದ ಅಷ್ಟೂ ಮೊತ್ತವನ್ನ  1 ರೂಪಾಯಿಯ ನಾಣ್ಯಗಳ ಮೂಲಕ ಪಾವತಿ ಮಾಡಿದ್ದಾನೆ!.  ಹೌದು ನೀವು ಕೇಳಿದ್ದು  ನಿಜ 2.60 ಲಕ್ಷ ರುಪಾಯಿಯನ್ನ ಒಂದು ರೂಪಾಯಿಯ ನಾಣ್ಯಗಳ ಮೂಲಕ  ಕೊಟ್ಟು ಬೈಕ್‌ ಖರೀದಿ ಮಾಡಿದ್ದಾನೆ. ಈತ ಗೋಣಿ ಚೀಲದಲ್ಲಿ ತುಂಬಿಕೊಂಡು ಬಂದ ನಾಣ್ಯ ನೋಡಿ ಶೋರೂಂ ಸಿಬ್ಬಂದಿಗಳೇ ದಂಗಾಗಿ ಹೋಗಿದ್ದಾರೆ.

ಒಂದು ರೂಪಾಯಿಯ ಲಕ್ಷಗಟ್ಟಲೆ ಕಾಯಿನ್ ಗಳನ್ನ ಬ್ಯಾಂಕ್‌ ಸಿಬ್ಬಂದಿ ಹಾಗೂ ವಿ ಭೂಪತಿ ಸ್ನೇಹಿತರು ಸೇರಿ ಒಟ್ಟು 10 ಜನ ಎಣಿಕೆ ಮಾಡಿದ್ದಾರೆ. ಸುಮಾರು 10 ತಾಸು ಎಣಿಸಿದ ಬಳಿಕ 2.6 ಲಕ್ಷ ರೂಪಾಯಿ ಇದೆ ಎಂದು ಖಚಿತಪಡಿಸಿಕೊಂಡು ಬಳಿಕ ಶೋರೂಂ ಸಿಬ್ಬಂದಿ ಬೈಕ್‌ ಹಸ್ತಾಂತರಿಸಿದ್ದಾರೆ. ಬೈಕ್‌ ಸ್ವೀಕಾರ ಮಾಡುತ್ತಲೇ,  ಭೂಪತಿಯ  ಕನಸು ನನಸಾದ ಖುಷಿಗೆ ಪಾರವೇ ಇರಲಿಲ್ಲ.  ಸದ್ಯ ಯುವಕನ ಬೈಕ್ ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd