ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸಹೋದರನ ಕೊಂದ ಪತಿ..!
ಉತ್ತರಪ್ರದೇಶ : ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಅಕ್ರಮ ಹೊಂದಿದ್ದ ಕಾರಣಕ್ಕೆ ಸಹೋದರನನ್ನ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಮೀರತ್ ನ ಕಂಕರ್ ಖೇರಾ ಪ್ರದೇಶದಲ್ಲಿ ನಡೆದಿದೆ.
ಕೊಲೆ ಆರರೋಪಿ ಆಶುನನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಪತ್ನಿಯೊಂದಿಗೆ ಆತನ ಸೋಹದರ ಸಂಬಂಧಿಯಾಗಿದ್ದ ಭೀಮ ಲೋಧಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ಗೊತ್ತಾಗಿ ಕೋಪಗೊಂಡಿದ್ದ ಆಶು ಸಂಚು ರೂಪಿಸಿ ಆತನನ್ನ ಕರೆಸಿಕೊಂಡಿದ್ದ.
ಅಶು ಮತ್ತು ಲೋಧಿ ಇಬ್ಬರು ಡ್ರಗ್ಸ್ ಸೇವಿಸುತ್ತಿದ್ದರು. ಡ್ರಗ್ಸ್ ತೆಗೆದುಕೊಳ್ಳುವ ನೆಪದಲ್ಲಿ ಲೋಧಿಯನ್ನು ಕರೆದುಕೊಂಡು ಹೋದ ಅಶು ಹರಿತವಾದ ಆಯುಧದಿಂದ ಕುತ್ತಿಗೆ ಇರಿದು ಕೊಲೆ ಮಾಡಿದ್ದಾನೆ.








