Bangalore | ಗುರಾಯಿಸಿದ ಎಂಬ ಕಾರಣಕ್ಕೆ ಚಾಕು ಇರಿತ
ತಮ್ಮನಿಗೆ ಚಾಕು ಇರಿದು ಕೊಲೆಗೈದ ಅಣ್ಣ
ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ನಡೆದ ಘಟನೆ
ಬಾಲು (22) ಕೊಲೆಯಾದ ದುರ್ದೈವಿ
ರಾಮಕೃಷ್ಣ (25) ಬಂಧಿತ ಆರೋಪಿ
ಬೆಂಗಳೂರು : ಗುರಾಯಿಸಿದ ಎಂಬ ಕಾರಣಕ್ಕೆ ಸ್ವಂತ ತಮ್ಮನನ್ನೇ ಅಣ್ಣ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರದಲ್ಲಿ ನಡೆದಿದೆ.
ಪ್ರಿಯಾಂಕನಗರದ ನಿವಾಸಿ 22 ವರ್ಷದ ಬಾಲು ಕೊಲೆಯಾದ ದುರ್ದೈವಿಯಾಗಿದ್ದು, 25 ವರ್ಷದ ರಾಮಕೃಷ್ಣ ಕೊಲೆ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಇವರು ತಮಿಳುನಾಡಿನ ಮಧುರೈ ಮೂಲದವರು. ಹಲವು ವರ್ಷಗಳಿಂದ ಕೆ.ಆರ್ ಪುರದ ಪ್ರಿಯಾಂಕನಗರದಲ್ಲಿರುವ ಕೊಳೆಗೇರಿಯಲ್ಲಿ ತಂದೆ-ತಾಯಿ ಜತೆಗೆ ವಾಸವಾಗಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಇಬ್ಬರು ಆಗಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದರು. ಇಂದು ಬಟ್ಟೆ ತೊಳೆಯುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ.

ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ತಮ್ಮ ಅಣ್ಣನಿಗೆ ಅವಾಚ್ಯಶಬ್ದಗಳಿಂದ ನಿಂದಿಸಿದ್ದಾನೆ.
ಇದರಿಂದ ಕುಪಿತನಾದ ಅಣ್ಣ ರಾಮಕೃಷ್ಣ ಅಡುಗೆ ಮನೆಯಿಂದ ಚಾಕು ತಂದು ತಂದೆ ತಾಯಿ ಎದುರಲ್ಲೇ ತಮ್ಮನಿಗೆ ಇರಿದಿದ್ದಾನೆ.
ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಬಾಲು ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ವೈಟ್ಫೀಲ್ಡ್ ಡಿಸಿಪಿ ಗಿರೀಶ್ ಮತ್ತು ಕೆ.ಆರ್.ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.