Mandya | ಕಾವೇರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ರಾಜವಂಶಸ್ಥರನ್ನ ಆಹ್ವಾನಿಸಿ
ಮಂಡ್ಯ : ನಾಳೆ ಕಾವೇರಿ ಮಾತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಲಿದ್ದಾರೆ.
ಹೀಗಾಗಿ ಬಾಗಿನ ಕಾರ್ಯಕ್ರಮಕ್ಕೆ ಮೈಸೂರು ರಾಜವಂಶಸ್ಥರನ್ನ ಆಹ್ವಾನಿಸುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಸಿಎಂ ಜೊತೆಗೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯಅವರಿಗೆ ಗೂಳಿಗೌಡ ಪತ್ರ ಬರೆದಿದ್ದಾರೆ.
ಪಾತ್ರದಲ್ಲಿ ಗೂಳಿಗೌಡ, KRS ಡ್ಯಾಂ ಕೇವಲ ಒಂದು ಡ್ಯಾಂ ಅಲ್ಲ, ಜನರ ಭಾವನಾತ್ಮಕ ವಿಚಾರ.

ಜಲಾಶಯ ಭರ್ತಿಯಾದರೇ ಬಾಗಿನ ಅರ್ಪಿಸುವುದು, ಪೂಜಿಸುವುದು ಪದ್ದತಿ.
KRS ಡ್ಯಾಂ 2.65 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಿದೆ.
ಮೈಸೂರು ಮಹಾರಾಜರ ದೂರದೃಷ್ಟಿಯ ಫಲ KRS ಜಲಾಶಯವಾಗಿದೆ.
ಆ ಹಿನ್ನಲೆ ಕಾವೇರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜೊತೆ ರಾಜವಂಶಸ್ಥರು ಹಾಜರಿರಲಿ.
ಅದು ಕಾವೇರಿ ಕೊಳ್ಳದ ಜನರ ಬಹುದಿನಗಳ ಆಶಯವಾಗಿದೆ ಎಂದು ಬರೆದಿದ್ದಾರೆ.