Mandya | ಹೆದ್ದಾರಿ ತಡೆ – ಮಂಡ್ಯದಲ್ಲಿ ರೈತರ ಅರೆಸ್ಟ್
ಮಂಡ್ಯ : ಕೆ.ಆರ್.ಎಸ್ ಸುತ್ತಮುತ್ತ ಶಾಶ್ವತ ಗಣಿಗಾರಿಕೆ ನಿಲ್ಲಿಸಬೇಕು, ಟನ್ ಕಬ್ಬಿಗೆ 4500 ರೂ ನಿಗದಿ ಮಾಡಬೇಕು, ಪ್ರತಿ ಲೀಟರ್ ಹಾಲಿಗೆ 40 ರೂ ನೀಡಬೇಕು.
ಹೀಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ರಸ್ತೆಗಿಳಿದಿದೆ.
ಮೈಸೂರು ಸಂಪರ್ಕ ಕಲ್ಪಿಸುವ ಹೆದ್ದಾರಿ ಸಂಪೂರ್ಣ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಮಂಡ್ಯ, ಮದ್ದೂರು, ಕೆ.ಆರ್.ಪೇಟೆ, ಮಳವಳ್ಳಿ, ಶ್ರೀರಂಗಪಟ್ಟಣ ಹಾಗೂ ಮೈಸೂರು ಜಿಲ್ಲೆಯ ಇಲವಾಲ, ಟಿ.ನರಸೀಪುರ, ನಂಜನಗೂಡು, ಹುಣಸೂರಿನಲ್ಲಿ ಹೆದ್ದಾರಿ ತಡೆಯಲಾಗಿದೆ.

ಇದರಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ರೈತರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಡ್ಯ ವಿಸಿ ಫಾರಂ ಗೇಟ್ ಬಳಿ ಪ್ರ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಯುತ್ತಿತ್ತು.
ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ರೈತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.