ಉಪ್ಪು ತಿಂದವರು ನೀರು ಕುಡಿಯಲೇಬೇಕು : ರವೀಂದ್ರ ಶ್ರೀಕಂಠಯ್ಯ
ಮಂಡ್ಯ : ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಅಧಿಕಾರಕ್ಕಾಗಿ ಪಕ್ಷ ಬದಲಿಸಿದ್ದ 17 ಶಾಸಕರ ವಿರುದ್ಧ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರನ್ನ ಸಿಎಂ ಭೇಟಿ ಮಾಡಿದ ನಂತರ ಒಪ್ಪಂದಕ್ಕೆ ಬಂದಿರುವುದು ಗೊತ್ತಾಗ್ತಿದೆ. ಅಧಿಕೃತವಾಗಿ ಇನ್ನೆರಡು ದಿನಗಳಲ್ಲಿ ರಾಜಿನಾಮೆ ಸಾಧ್ಯತೆ ಇದೆ. ಕೋವಿಡ್ ಸಂದರ್ಭದಲ್ಲಿ ಈ ರೀತಿ ರಾಜಕೀಯ ಜಂಜಾಟ ನಡೆಯುತ್ತಿರೋದು ಸಾರ್ವಜನಿಕರಲ್ಲಿ ಬೇಸರ ತರಿಸಿದೆ ಎಂದರು.
ಇನ್ನು ಆದಷ್ಟು ಬೇಗ ಸಿಎಂ ಬದಲಾವಣೆ ಮಾಡಿಕೊಂಡು ಜನರ ಕೆಲಸ ಮಾಡಲಿ. ರಾಜಕೀಯದಲ್ಲಿ ಜನಾದೇಶಕ್ಕೆ ತಲೆ ಭಾಗಬೇಕು. ಜನರ ಭಾವನೇಗಳ ಜೊತೆ ಆಟವಾಡಿ, ರಾಜೀನಾಮೆ ನೀಡಿ ಮತ್ತೊಂದು ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ನಮ್ಮ ಹಳ್ಳಿಕಡೆ ಗಾಧೆ ಇದೆ ಉಪ್ಪು ತಿಂದವರು ನೀರು ಕುಡಿಲೆ ಬೇಕು ಅಂತ ಹಾಗ್ ಆಗಿದೆ ಅವರ ಪರಿಸ್ಥಿತಿ. ಇದನ್ನ ಮುಂಚಿತವಾಗಿ ಅವರು ಯೋಚನೆ ಮಾಡಬೇಕಿತ್ತು ಆದ್ರೆ ಅವರು ಯೋಚನೆ ಮಾಡಲಿಲ್ಲ. ಈಗ ಅವರಿಗೆ ರಾಜಕೀಯ ಅಸ್ಥಿರತೆ ಕಾಡುತ್ತದೆ ಎಂದು ಕಿಡಿಕಾರಿದ್ದಾರೆ.










