ಹಸುಗೂಸನ್ನ ಪಾಳು ಬಾವಿಗೆ ಎಸೆದ ತಾಯಿ – ಹಾವಿನ ಪಕ್ಕದಲ್ಲೇ ಇದ್ದು ಸಾವು ಗೆದ್ದ ಮಗು
ಹಸುಗೂಸನ್ನ ಪಾಳು ಬಾವಿಗೆ ಎಸೆದು ಹೋಗಿರುವ ಮನಕಲುಕುವ ಘಟನೆ ಮಂಡ್ಯ ಪಾಂಡವಪುರದಲ್ಲಿ ನಡೆದಿದೆ. ತಾಯಿ ಮಗುವನ್ನ 40 ಅಡಿ ಆಳದ ಬಾವಿಗೆ ಎಸೆದಿದ್ದು ಬಾವಿಯಲ್ಲಿದ್ದ ಹಾವಿನ ಪಕ್ಕದಲ್ಲಿಯೇ ಇದ್ದು ಮಗು ಎರಡೆರೆಡು ಬಾರಿ ಸಾವನ್ನ ಗೆದ್ದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತೋಟಕ್ಕೆ ಹೋಗುವಾಗ ಮಹಿಳೆ ಕಣ್ಣಿಗೆ ಈ ದೃಶ್ಯ ಕಣ್ಣಿಗೆ ಬಿದ್ದುದ್ದು, ಹಾವಿನ ಪಕ್ಕದಲ್ಲೇ ಮಗು ಇರುವ ದೃಶ್ಯ ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ. ನಂತರ ಗ್ರಾಮಸ್ಥರು ಬಾವಿಗಿಳಿದು ಮಗುವನ್ನ ರಕ್ಷಣೆ ಮಾಡಿದ್ದಾರೆ.
ಬಳಿಕ ಮಗುವಿಗೆ ಎದೆ ಹಾಲುಣಿಸಿ ಗ್ರಾಮ ಮಹಿಳೆ ಮಾನವೀಯತೆ ಮೆರೆದಿದ್ದಾರೆ. ನಂತರ ಗ್ರಾಮದ ಮಹಿಳೆಯರೇ ಮಗುವನ್ನ ಹಾರೈಕೆ ಮಾಡಿದ್ದಾರೆ. ಸದ್ಯಕ್ಕೆ ವಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಮಗು ಆರೋಗ್ಯವಾಗಿದೆ. ಬಾವಿ ಮೇಲಿಂದ ಎಸೆದಿರುವ ಕಾರಣ ಮಗು ಬೆನ್ನ ಹಿಂದೆ ಸಣ್ಣ ಪುಟ್ಟ ಗಾಯವಾಗಿದೆ. ಇನ್ನೂ 10, 15 ದಿನ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾಗುವುದು ಎಂದು ಮಂಡ್ಯ ಮಿಮ್ಸ್ ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.