Mangalore | ಗಂಡ – ಹೆಂಡತಿ ಜಗಳ – ವಿಷ ಕುಡಿದ ವ್ಯಕ್ತಿ
ಮಂಗಳೂರು : ಗಂಡ – ಹೆಂಡತಿ ಜಗಳಕ್ಕೆ ಬೇಸತ್ತು ವ್ಯಕ್ತಿ ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕು ರಾಮನಾಥಪುರ ನಿವಾಸಿ ಸುನೀಲ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾರೆ.

ಸುನೀಲ್ ಧರ್ಮಸ್ಥಳದ ಗಾಂಧಿ ಪಾರ್ಕ್ ಗುಡ್ಡಕ್ಕೆ ವಿಷ ಕುಡಿಯುವ ವಿಡಿಯೋವನ್ನು ಮನೆಯವರಿಗೆ ಕಳುಹಿಸಿದ್ದಾರೆ.
ಇದರ ವಿಡಿಯೋವನ್ನು ಮನೆಯವರು ಧರ್ಮಸ್ಥಳ ಪೊಲೀಸರಿಗೆ ರವಾನಿಸಿದ್ದಾರೆ.
ತಕ್ಷಣ ಕಾರ್ಯ ಪ್ರೌರುತ್ತರಾದ ಪೊಲೀಸರು ತಕ್ಷಣ ಸುನೀಲ್ ನನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.









