ಮಂಗಳೂರು : ಬೀದಿ ದೀಪ ಅಳವಡಿಕೆ ಮತ್ತೆ ಆರಂಭ
ಮಂಗಳೂರು : ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಎಲ್ ಇಡಿ ಬೀದಿ ದೀಪ ಅಳವಡಿಸುವ ಕಾಮಗಾರಿ ಮತ್ತೆ ವೇಗ ಪಡೆದುಕೊಂಡಿದೆ.
ಯೆಯ್ನಾಡಿ ಮತ್ತು ಗಾಂಧಿನಗರ ಪ್ರದೇಶಗಳಲ್ಲಿ ಸದ್ಯ ಬಲ್ಬ್ ಅಳವಡಿಸುವ ಕಾರ್ಯ ನಡೆಯುತ್ತಿದೆ.
ಬೀದಿ ದೀಪ ಅಳವಡಿಸುವ ನಿಟ್ಟಿನಲ್ಲಿ ಗುತ್ತಿಗೆ ವಹಿಸಿಕೊಂಡ ಸಂಸ್ಥೆಗೆ ಮೂರು ತಿಂಗಳ ಇಒಟಿ ನೀಡಲಾಗಿದೆ.

ಮೂಲಗಳ ಪ್ರಕಾರ ಬಲ್ಬ್ ಅಳವಡಿಸುವ ಕಾಮಗಾರಿ 2021ರ ಡಿಸೆಂಬರ್ ಅಂತ್ಯದೊಳಗೆ ನಗರದ 60 ವಾರ್ಡ್ ಗಳಲ್ಲಿ ಸುಮಾರು 66,000 ಎಲ್ ಇಡಿ ಬೀದಿ ದೀಪ ಅಳವಡಿಸಬೇಕಿತ್ತು.
ಆದ್ರೆ ಸದ್ಯ ವಾರ್ಡ್ ಗಳಲ್ಲಿ ಸುಮಾರು 12,600 ಬೀದಿ ದೀಪ ಮಾತ್ರ ಅಳವಡಿಸಲಾಗಿದೆ.
ಹಣಕಾಸಿನ ಮುಗ್ಗಟ್ಟು ಕೊರತೆ ನೆಪ ನೀಡಿ ಟೆಂಡರ್ ಪಡೆದಿದ್ದ ಸಂಸ್ಥೆ ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು.
ಇದೀಗ ಮತ್ತೆ ಬಲ್ಬ್ ಅಳವಡಿಸಲು ಮೂರು ತಿಂಗಳ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಪಾಲಿಕೆಯು ಸದ್ಯ ಇಒಟಿ ನೀಡಿದೆ.