Mangalore | ಮಂಗಳೂರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ಕರವಾಳಿ ಭಾಗದ ಜನರ ಎರಡೂವರೆ ದಶಕದ ಕನಸು ಕೊನೆಗೂ ನನಸಾಗುವ ಸಮಯ ಬಂದಿದೆ.
ಬೆಂಗಳೂರಿನಲ್ಲಿರುವಂತೆ ಮಂಗಳೂರಿನಲ್ಲಿಯೂ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಲಿದೆ.
ಮಂಗಳೂರು ನಗರದ ಹೊರವಲಯದಲ್ಲಿರುವ ಕೊಣಾಜೆ ಬಳಿ ನೂತನ ಕ್ರೀಡಾಂಗಣ ನಿರ್ಮಾಣಕ್ಕೆ ಪೂರಕ ಕೆಲಸಗಳು ನಡೆಯುತ್ತಿವೆ.
ಇಲ್ಲಿನ ಸುಮಾರು 20 ಎಕರೆ ಜಾಗದಲ್ಲಿ ಕ್ರೀಡಾಂಗಣ ತಲೆ ಎತ್ತಲಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಜಾಗ ಪರಿಶೀಲನೆ ನಡೆಸಿದೆ.
ಕ್ರೀಡಾಂಗಣ ನಿರ್ಮಾಣಗೊಂಡರೇ ಅಂಡರ್ 18, ಭಾರತ – ಎ ಪಂದ್ಯಗಳು, ರಣಜಿ, ಮಹಿಳಾ ಕ್ರಿಕೆಟ್ ಸಹಿತ ರಾಷ್ಟ್ರೀಯ ಪಂದ್ಯಾವಳಿ ಆಯೋಜನೆಗೊಳ್ಳಲಿದೆ.
ಮಂಗಳೂರಿನಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ಸುಸರ್ಜಿತ ಕ್ರೀಡಾಂಗಣ ಇಲ್ಲ ಎಂಬ ಅಳಲು ಮಂಗಳೂರು ಮಂದಿಗಿತ್ತು.
ಕೊಣಾಜೆ ಬಳಿ ಇದೀಗ ಕ್ರೀಡಾಂಗಣ ನಿರ್ಮಾಣವಾಗುತ್ತಿರುವುದು ಇಲ್ಲಿನ ಮಂದಿಗೆ ಖುಷಿ ಕೊಟ್ಟಿದೆ. ಅಂದಹಾಗೆ ಕೊಣಾಜಿ ಪ್ರದೇಶದ ಪಕ್ಕದಲ್ಲಿಯೇ ಮಂಗಳೂರು ನಗರವಿದೆ.
ಕಾಸರಗೋಡು ಸಂಪರ್ಕವೂ ಹೊಂದಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೀಮಿತ ದೂರದಲ್ಲಿದೆ. ಹೀಗಾಗಿ ಕೊಣಾಜೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ.
ಈ ಬಗ್ಗೆ ಕೆಎಸ್ ಸಿಎ ಮಂಗಳೂರು ವಲಯ ಸಂಚಾಲಕರು ಪ್ರತಿಕ್ರಿಯೆ ನೀಡಿದ್ದು, ಮಂಗಳೂರಿನ ಕೊನಾಜೆ ಬಳಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಪೂರಕ ಪ್ರಕ್ರಿಯೆಗಳಾಗಿ ಪತ್ರ ವ್ಯವಹಾರ ನಡೆಯುತ್ತಿದೆ.
ಕಂದಾಯ ಇಲಾಖೆ ಜೊತೆ ಮಾತುಕತೆ ನಡೆಯಬೇಕಾಗಿದೆ. ಕ್ರೀಡಾಂಗಣ ನಿರ್ಮಾಣಗೊಂಡರೇ ಹಲವಾರು ಕ್ರೀಡಾಪಟುಗಳಿಗೆ ಉತ್ತೇಜನ ಸಿಗಲಿದೆ ಎಂದಿದ್ದಾರೆ.