ಲಕ್ಷದ್ವೀಪಕ್ಕೆ ಹೋಗಿ ಕಡಲತೀರದ ಮೇಲೆ ಅಡ್ಡಾಡಲು ಬಯಸುವವರಿಗೆ ಇಲ್ಲಿದೆ ಸಿಹಿಯಾದ ಸುದ್ದಿ. ‘ಮಿನಿಕೋಯಿ’ ಎಂಬ ಹಡಗು ಮಂಗಳೂರು ಮತ್ತು ಲಕ್ಷದ್ವೀಪಗಳ ನಡುವೆ ಕಾರ್ಯಾಚರಣೆ ಆರಂಭಿಸಿದೆ. ಮಾರ್ಚ್ 4 ರ ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಂಗಳೂರಿನ ಹಳೆಯ ಬಂದರಿನಿಂದ ಪ್ರಯಾಣ ಆರಂಭಿಸಿರುವ ಈ ಹಡಗು, ಗುರುವಾರ ಬೆಳಿಗ್ಗೆ ಲಕ್ಷದ್ವೀಪದ ಕವರಟ್ಟಿ ತಲುಪುವ ನಿರೀಕ್ಷೆಯಿದೆ. ಈ ಹಡಗಿನೊಂದಿಗೆ ಮಂಗಳೂರು ಮತ್ತು ಲಕ್ಷದ್ವೀಪ ನಡುವಿನ ಸಂಪರ್ಕವು ಪುನರಾರಂಭವಾಗಿದೆ. ಇಲ್ಲಿಯವರೆಗೆ, ಪ್ರಯಾಣಿಕರು ಲಕ್ಷದ್ವೀಪಕ್ಕೆ ಹೋಗಬೇಕಾದರೆ ಕೊಚ್ಚಿಗೆ ಹೋಗಬೇಕಾಗಿತ್ತು.
ಆಶ್ಚರ್ಯಕರ ಮತ್ತು ಸಂತೋಷದ ವಿಷಯವೇನೆಂದರೆ ಟಿಕೆಟ್ ಶುಲ್ಕ ಒಬ್ಬರಿಗೆ ಕೇವಲ 200 ರೂ(ತೆರಿಗೆ ಮತ್ತು ಇತರೆ ಹೊರತುಪಡಿಸಿ).
ಈ ಹಡಗಿನಲ್ಲಿ 150 ಆಸನ ಸಾಮರ್ಥ್ಯವಿದ್ದು, ಕೊಚ್ಚಿಯ ಹಡಗು ಕಂಪನಿಯೊಂದು ಈ ಸೇವೆಯನ್ನು ಪ್ರಾರಂಭಿಸಿದೆ. ಬುಧವಾರ ಸುಮಾರು 40 ಪ್ರಯಾಣಿಕರು ‘ಮಿನಿಕೋಯಿ’ನಲ್ಲಿ ಮಂಗಳೂರಿನಿಂದ ಲಕ್ಷ ದ್ವೀಪದ ಕಡೆ ಪಯಣ ಬೆಳೆಸಿದ್ದಾರೆ.
ಆದರೂ ಒಬ್ಬ ವ್ಯಕ್ತಿ ಲಕ್ಷದ್ವೀಪಕ್ಕೆ ಹೋಗಬಯಸಿದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗಿದೆ. ಈ ದ್ವೀಪಗಳಿಗೆ ಭೇಟಿ ನೀಡಲು ಲಕ್ಷದ್ವೀಪ ಆಡಳಿತ ನೀಡಿದ ಪ್ರವೇಶ ಪರವಾನಗಿಯ ಅಗತ್ಯವಿರುತ್ತದೆ. ನಂತರ ಆ ಗುರುತಿನ ಚೀಟಿ ಬಳಸಿ ಟಿಕೆಟ್ ಕಾಯ್ದಿರಿಸಬಹುದು.
ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಮತ್ತು ದ್ವೀಪದಲ್ಲಿ ಉಳಿಯಲು ಪ್ರವಾಸೋದ್ಯಮ ಏಜೆನ್ಸಿಗಳ ಪ್ಯಾಕೇಜ್ ಸೌಲಭ್ಯಗಳು ಲಭ್ಯವಿದೆ.
ಕಾಂಗ್ರೆಸ್ ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್
ಬೆಂಗಳೂರು, ಸೆ.16: ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (Congress) ಶಾಸಕ ಕೆವೈ ನಂಜೇಗೌಡ (KY Nanjegowda) ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ, ಮತ...








