ರಾಬರ್ಟ್ ನಂತರ ಕನ್ನಡದ ಮತ್ತೊಂದು ಚಿತ್ರದ ಹಾಡಿಗೆ ಧ್ವನಿಯಾದ ಮಂಗ್ಲಿ..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ತೆಲುಗು ವರ್ಷನ್ ನ ಕಣ್ಣೇ ಅದಿರಿಂದಿ ಹಾಡು ಹಾಡಿ ರಾತ್ರೋ ರಾತ್ರಿ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದ ಗಾಯಕಿ ಮಂಗ್ಲಿ.. ಅರ್ಜುನ್ ಜನ್ಯ ಸಂಯೋಜನೆಯ ಹಾಡಿಗೆ ಧ್ವನಿಯಾಗಿದ್ದ ಮಂಗ್ಲಿ ವಾಯ್ಸ್ ಗೆ ಕನ್ನಾಡಾಭಿಮಾನಿಗಳು ಸಹ ಫಿದಾ ಆಗಿದ್ರು.. ಇದೀಗ ಮಂಗ್ಲಿ ಮತ್ತೊಂದು ಕನ್ನಡ ಸಿನಿಮಾದ ಹಾಡಿಗೆ ಅರ್ಜುನ್ ಜನ್ಯ ಅವರೇ ಕಂಪೋಸ್ ಮಾಡಿರುವ ಹಾಡಿಗೆ ಧ್ವನಿಯಾಗಿದ್ದಾರೆ..
ಹೌದು ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಮತ್ತೊಂದು ದೊಡ್ಡ ಪ್ರಾಜೆಕ್ಟ್‌ನಲ್ಲಿ ಮಂಗ್ಲಿ ಧ್ವನಿಗೂಡಿಸಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ತಾಯಾರಾಗುತ್ತಿರುವ ಏಕ್ ಲವ್ ಯಾ ಸಿನಿಮಾದ ಹಾಡಿಗೆ ಮಂಗ್ಲಿ ಧ್ವನಿಯಾಗಿದ್ದಾರೆ ಎಂಬ ವಿಷಯ ಹೊರಬಿದ್ದಿದೆ. ಈ ಕುರಿತು ಸ್ವತಃ ಮಂಗ್ಲಿ ಟ್ವಿಟ್ಟರ್‌ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.
‘ಲೆಜೆಂಡರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಜೊತೆ ಮತ್ತೊಮ್ಮೆ ಕೆಲಸ ಮಾಡಿದ್ದು ಮತ್ತು ಅವರನ್ನು ಭೇಟಿ ಮಾಡಿದ್ದು ಖುಷಿ ಸಂಗತಿ. ಅವರದ್ದು ವಿಶಾಲ ಹೃದಯದ ವ್ಯಕ್ತಿತ್ವ. ಅವರ ಪ್ರಾಜೆಕ್ಟ್‌ನಲ್ಲಿ ಭಾಗವಾಗಿದ್ದು ನಿಜಕ್ಕೂ ಹೆಮ್ಮೆ ಎನಿಸಿದೆ’ ಎಂದು ಮಂಗ್ಲಿ ಟ್ವೀಟ್ ಮಾಡಿದ್ದಾರೆ.
ಅರ್ಜುನ್ ಜನ್ಯ ಸಹ ಮಂಗ್ಲಿ ಜೊತೆ ಇನ್ನೊಂದು ಹಾಡು ಹಾಡಿಸಿರುವುದಾಗಿ ಖುಷಿ ಹಂಚಿಕೊಂಡಿದ್ದಾರೆ. ಇದಕ್ಕೂ ಮುಂಚೆ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ‘ಕಣ್ಣಾ ಹೊಡೆಯೊಕ’ ಹಾಡಿನ ತೆಲುಗು ವರ್ಷನ್ ಮಂಗ್ಲಿ ಹಾಡಿದ್ದರು. ಕನ್ನಡಕ್ಕಿಂತ ಈ ಹಾಡು ತೆಲುಗಿನಲ್ಲಿಯೇ ದೊಡ್ಡ ಹಿಟ್ ಆಗಿತ್ತು.
https://twitter.com/i/status/1420370289439830017
ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್ ಮುಗಿದಿದೆ. ದಿ ವಿಲನ್ ಸಿನಿಮಾದ ಬಳಿಕ ಪ್ರೇಮ್ ನಿರ್ದೇಶನ ಮಾಡುತ್ತಿರುವ ‘ಏಕ್ ಲವ್ ಯಾ’ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ರಕ್ಷಿತಾ ಅವರ ಸಹೋದರ ರಾಣಾ ಚೊಚ್ಚ ಬಾರಿಗೆ ನಾಯಕನಟನಾಗಿ ಇಂಡಸ್ಟ್ರಿ ಪ್ರವೇಶಿಸುತ್ತಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.









