ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಹಾವಳಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದೇ ದಿನ ದಕ್ಷಿಣ ಕನ್ನಡದಲ್ಲಿ ಹೊಸದಾಗಿ 146 ಮಂದಿಗೆ ಸೋಂಕು ತಗುಲಿರುವುದು ಧೃಢವಾಗಿದ್ರೆ ಕೊರೊನಾ ಮರಣ ಮೃದಂಗಕ್ಕೆ ಒಟ್ಟು 8 ಮಂದಿ ಒಂದೇ ದಿನದಲ್ಲಿ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 228 ಕ್ಕೆ ಬಂದು ತಲುಪಿದೆ. ಇಂದು ಪತ್ತೆಯಾದ ಸೋಂಕಿತರ ಪೈಕಿ ಮಂಗಳೂರು ತಾಲೂಕಿನಲ್ಲಿ 90 ಮಂದಿ, ಬೆಳ್ತಂಗಡಿಯ 16, ಬಂಟ್ವಾಳದ 11, ಪುತ್ತೂರು 7,ಸುಳ್ಯದ 1 ಹಾಗೂ ಹೊರ ಜಿಲ್ಲೆಯಿಂದ ಬಂದ 17 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೂ ಪತ್ತೆಯಾದ ಸೋಂಕಿತರ ಸಂಖ್ಯೆ 7,353 ಕ್ಕೆ ತಲುಪಿದೆ. ದಿನೇ ದಿನೇ ಸೋಂಕು ಹಾಗೂ ಸಾವಿನ ಸಂಖ್ಯೆಯಲ್ಲಿ ಹೆಚ್ಚಾಗುತ್ತಲೇ ಇರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ
ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಹಗರಣದ ತನಿಖೆ ಚುರುಕುಗೊಂಡಿದ್ದು ಈಗಾಗಲೇ...








