ಎಳನೀರು ಮಾರಾಟದಿಂದ ಶಾಲೆಗೆ 1 ಲಕ್ಷ ದೇಣಿಗೆ ನೀಡಿದ ಮಹಿಳೆ, ಮೋದಿ ಮೆಚ್ಚುಗೆ..
ಈ ವರ್ಷದ ‘ಮನ್ ಕಿ ಬಾತ್’ ಮೊದಲ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತೆಂಗಿನ ಎಳನೀರು ಮಾರಾಟ ಮಾಡುವ ಮೂಲಕ ಶಾಲೆಯೊಂದರ ಕಟ್ಟಡ ಸುಧಾರಣೆಗೆ 1 ಲಕ್ಷ ರೂ ದೇಣಿಗೆ ನೀಡಿದ ತಮಿಳುನಾಡಿನ ಮಹಿಳೆಯ ಶಿಕ್ಷಣದ ಒಲವನ್ನು ಶ್ಲಾಘಿಸಿದ್ದಾರೆ.
ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರು ಉತ್ತರ ಪ್ರದೇಶದ ಅಲಿಗಢ್ ಮತ್ತು ಮಥುರಾದಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ಸುಧಾರಣೆಗೆ ನೀಡಿದ ಕೊಡುಗೆಗಳ ಕುರಿತು ಮಾತನಾಡಿದ ಮೋದಿ, ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ತಾಯಮ್ಮಲ್ ಅವರನ್ನು ಪ್ರಸ್ತಾಪಿಸಿದರು.
ತಾಯಮ್ಮಲ್ ಅವರ ಕಥೆಯನ್ನು “ಬಹಳ ಸ್ಪೂರ್ತಿದಾಯಕ” ಎಂದು ಶ್ಲಾಘಿಸಿದ ಪ್ರಧಾನಿ ಅವರು ತಮಿಳುನಾಡು ಆಕೆಗೆ ಸ್ವಂತ ಭೂಮಿ ಇಲ್ಲ ಮತ್ತು ಹಲವು ತೆಂಗಿನ ನೀರನ್ನು ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು. ಆಕೆಯ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲದಿದ್ದರೂ, ತಾಯಮ್ಮಲ್ ತನ್ನ ಮಗ ಮತ್ತು ಮಗಳಿಗೆ ಶಿಕ್ಷಣ ನೀಡಲು ಹಿಂದೇಟು ಹಾಕಲಿಲ್ಲ. ಆಕೆಯ ಮಕ್ಕಳು ಚಿನ್ನವೀರಂಪಟ್ಟಿ ಪಂಚಾಯತ್ ಯೂನಿಯನ್ ಮಿಡ್ಲ್ ಸ್ಕೂಲ್‌ನಲ್ಲಿ ಓದಿದ್ದಾರೆ ಎಂದು ಮೋದಿ ಹೇಳಿದರು.