Mannat : ಶಾರುಖ್ ಖಾನ್ ಮನೆಗೆ ನುಗ್ಗಲು ಯತ್ನಿಸಿದ ಇಬ್ಬರು ಯುವಕರು ಅರೆಸ್ಟ್…
ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬೈ ನಿವಾಸ್ ಐಷಾರಾಮಿ ‘ಮನ್ನತ್’ ಬಂಗಲೆಗೆ ಪ್ರವೇಶಿಸಲು ಯತ್ನಿಸಿದ ಇಬ್ಬರು ದುಷ್ಕರ್ಮಿಗಳನ್ನ ಸೆಕ್ಯೂರಿಟಿ ಪಡೆಗಳು ತಡೆ ಹಿಡಿದಿದ್ದಾರೆ.
ಹೊರಗಿನ ಕಾಂಪೌಂಡ್ ಗೋಡೆ ಹತ್ತಲು ಯತ್ನಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದಾರೆ. ಕೂಡಲೇ ಇಬ್ಬರು ಯುವಕರನ್ನ ಹಿಡಿದ ಸಕ್ಯೂರಿಟಿ ಗಾರ್ಡ್ ಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್ ತನಿಖೆ ವೇಳೆ ಇಬ್ಬರೂ ಗುಜರಾತ್ ಮೂಲದವರು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ ಇಬ್ಬರು ಯುವಕರ ವಯಸ್ಸು 20 ರಿಂದ 22 ವರ್ಷ. ಶಾರುಖ್ ಖಾನ್ ಎಂದರೆ ತಮಗೆ ತುಂಬಾ ಇಷ್ಟ. ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ನೋಡಲು ಈ ರೀತಿ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಪೊಲೀಸರು ಅವರ ವಿರುದ್ಧ ಐಪಿಸಿ ಮತ್ತು ಇತರ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ಅತಿಕ್ರಮ ಪ್ರವೇಶಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ.
Mannat: Two youths arrested for trying to break into Shahrukh Khan’s house…