Mantralaya | ರಾಯರ 351ನೇ ಆರಾಧನಾ ಮಹೋತ್ಸವ -(Sri Guru Raghavendraswamy’s 351st Aradhana Mahotsava)
ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವ
ಇಂದು ರಾಯರ ಪೂರ್ವಾರಾಧನೆ
ಉತ್ಸವ ಮೂರ್ತಿಯ ರಜತ ಸಿಂಹ ವಾಹನೋತ್ಸವ
ರಾಯರ ಆರಾಧನೆಗೆ ಸಾಕಷ್ಟು ಸಿದ್ಧತೆ
ರಾಯಚೂರು : ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಮಹೋತ್ಸವ ಆರಂಭವಾಗಿದ್ದು, ಇಂದು ರಾಯರ ಪೂರ್ವಾರಾಧನೆ ನಡೆಯುತ್ತಿದೆ.
ಅದರ ಭಾಗವಾಗಿ ರಾಯರ ಉತ್ಸವ ಮೂರ್ತಿಯ ರಜತ ಸಿಂಹ ವಾಹನೋತ್ಸವ ನೆರವೇರಲಿದೆ. ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪ್ರತಿ ಬಾರಿಯಂತೆ ಈ ಸಲವೂ ಭಕ್ತರ ದಂಡು ರಾಯರ ಸನ್ನಿದ್ಧಿಗೆ ಆಗಮಿಸುತ್ತಿದ್ದು, ರಾಯರ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಅಂದಹಾಗೆ ಭಾರಿ ಮಳೆಯಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಲೇ ಇದೆ.
ಹೀಗಾಗಿ ಮಠದ ಸುತ್ತ ನದಿ ತೀರದಲ್ಲಿ ತೀವ್ರ ನಿಗಾವಹಿಸಲಾಗಿದೆ. ನದಿಯ ಪುಣ್ಯಸ್ನಾನಕ್ಕೆ ನಿಷೇಧ ಹೇರಲಾಗಿದೆ.
ಭಕ್ತರು ತುಂಗಭದ್ರಾ ನದಿ ತೀರಕ್ಕೆ ಹೋಗದಂತೆ ಕಟ್ಟೆಚ್ಚರವಹಿಸಲಾಗಿದೆ. ಜೊತೆಗೆ ಭಕ್ತರ ಸ್ನಾನಕ್ಕೆ ತಾತ್ಕಾಲಿಕ ಸ್ನಾನ ಘಟ್ಟಗಳನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ: : ಸಂಪತ್ ವೃದ್ಧಿಗಾಗಿ “ಸಂಪತ್ ಶುಕ್ರವಾರ ವ್ರತ ಪೂಜೆ ಮಾಡುವ ವಿಧಾನ