ಮಂಗಳನ ಅಂಗಳದಲ್ಲಿ ಮತ್ತೊಂದು ಸಾಧನೆ ಮಾಡಿದ ನಾಸಾ..!

1 min read

ಮಂಗಳನ ಅಂಗಳದಲ್ಲಿ ಮತ್ತೊಂದು ಸಾಧನೆ ಮಾಡಿದ ನಾಸಾ..!

ಪ್ರಬಲ ಬಾಹ್ಯಾಕಾಶ ಸಂಸ್ಥೆಯಾಗಿರುವ ಅಮೆರಿಕಾ ಮೂಲದ ನಾಸಾ ಇದೀಗ ಮಂಗಳನ ಅಂಗಳದಲ್ಲಿ ಮತ್ತೊಂದು ಸಾಧನೆ ಮಾಡಿದೆ. ನಾಸಾದ ಪರ್ಸೀವರೆನ್ಸ್ ರೋವರ್ ಮಂಗಳ ಗ್ರಹದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಬಳಸಿ ಯಶಸ್ವಿಯಾಗಿ ಆಮ್ಲಜನಕ ತಯಾರಿಸಿದೆ.

ಈ ಪ್ರಯೋಗವನ್ನು ಎಪ್ರಿಲ್ 20ರಂದು ಮಾರ್ಸ್ ಆಕ್ಸಿಜನ್ ಇನ್-ಸಿಟು ರಿಸೋರ್ಸ್ ಯುಟಿಲೈಝೇಶನ್ ಇಕ್ವಿಪ್ಮೆಂಟ್ ನಡೆಸಿತ್ತು. ಟೋಸ್ಟರ್ ಗಾತ್ರದ ಈ ಉಪಕರಣದ ಯಶಸ್ಸು ದೊಡ್ಡ ಸಾಧನೆಯೆಂದೇ ಬಿಂಬಿಸಲಾಗಿದೆ.

ಈ ಯಶಸ್ವೀ ಪ್ರಯೋಗ ಮುಂದೆ ಮಂಗಳನ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಆಕ್ಸಿಜನ್ ಉತ್ಪಾದನೆಗೆ ನಾಂದಿಯಾಗುವ ಸಾಧ್ಯತೆಯಿದೆಯೆನ್ನಲಾಗಿದೆ. ಸುಮಾರು 800 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ.

ಈ ಚಿನ್ನ ಲೇಪಿತ ಇನ್ಸುಲೇಟೆಡ್ ಉಪಕರಣ ಅಂತಿಮವಾಗಿ 5.4 ಗ್ರಾಂ ಆಕ್ಸಿಜನ್ ಅನ್ನು ಒಂದು ಗಂಟೆಯಲ್ಲಿ ಉತ್ಪತ್ತಿ ಮಾಡಿದೆ. ಮುಂದಿನ ಹಂತಗಳಲ್ಲಿ ಈ ಉಪಕರಣ ಪ್ರತಿ ಗಂಟೆಗೆ 10ರಿಂದ 12 ಗ್ರಾಂ ಆಕ್ಸಿಜನ್ ಉತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿದೆ.

ಆಕ್ಸಿಜನ್ ಇನ್-ಸಿಟು ರಿಸೋರ್ಸ್ ಯುಟಿಲೈಝೇಶನ್ ಇಕ್ವಿಪ್ಮೆಂಟ್ ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿ ಅದನ್ನು ಕಂಪ್ರೆಸ್ ಮಾಡಿ ಫಿಲ್ಟರ್ ಮಾಡಿ ಅನಿಲದಿಂದ ಎಲ್ಲಾ ಮಾಲಿನ್ಯಕಾರಕಗಳನ್ನು ಹೊರಹಾಕುತ್ತಿದೆ.

ಈ ಅನಿಲಕ್ಕೆ ನಂತರ ಶಾಖ ನೀಡಿ ಆಕ್ಸಿಜನ್ ಅಣುಗಳನ್ನು ಕಾರ್ಬನ್ ಡೈಆಕ್ಸೈಡ್ ಕಣಗಳಿಂದ ಪ್ರತ್ಯೇಕಿಸಿದಾಗ ಕಾರ್ಬನ್ ಮೊನೋಕ್ಸೈಡ್ ಆಗುತ್ತದೆ.

ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದ ಈ ದೇಶಗಳು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd