‘ದಳಪತಿ’ಯ ‘ಮಾಸ್ಟರ್’ ಹಿಂದಿಗೆ ರೀಮೇಕ್ – ನಾಯಕ ಯಾರು ಗೊತ್ತಾ..?
ಕೊರೊನಾ ಲಾಕ್ ಡೌನ್ ಬಳಿಕ ಶೇ 50 % ಸೀಟಿಂಗ್ ವ್ಯವಸ್ಥೆ ನಡುವೆಯೇ Jan 13ಕ್ಕೆ ಅದ್ಧೂರಿಯಾಗಿ ಸಿನಿಮಾ ಮಂದಿರಗಳಿಗೆ ಅಪ್ಪಳಿಸಿದ್ದ ದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ತಮಿಳು ,ತೆಲುಗು, ಕನ್ನಡ, ಹಿಂದಿ, ಮಲಯಾಳಂಗೂ ಕೂಡ ಡಬ್ ಆಗಿ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಬಳಿಕ OTT ಗೂ ಎಮಟ್ರಿಕೊಟ್ಟು ಅಬ್ಬರಿಸಿತ್ತು.
ಇದೀಗ ಈ ಸಿನಿಮಾ ಹಿಂದಿಯಲ್ಲಿ ರೀಮೇಕ್ ಆಗ್ತಿದ್ದು, ವಿಜಯ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಎಲ್ಲಾ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದ್ದು, ದಳಪತಿಯ ಪಾತ್ರದಲ್ಲಿ ಬಾಲಿವುಡ್ ನ ಸುಲ್ತಾನ ಸಲ್ಮಾನ್ ಖಾನ್ ಮಿಂಚಲಿದ್ದಾರೆ ಎನ್ನಲಾಗ್ತಿದೆ. ಅಂದ್ಹಾಗೆ ಮುರಾದ್ ಖೇತನಿ ಅವರು ಹಿಂದಿಯಲ್ಲಿ ರೀಮೇಕ್ ಗೆ ಬಂಡವಾಳ ಹೂಡಲಿದ್ದಾರೆ ಎನ್ನಲಾಗಿದೆ.
ಇನ್ನೂ ಸಿನಿಮಾದಲ್ಲಿ ಮತ್ತೊಂದು ಪಾತ್ರವೂ ಕೂಡ ತುಂಬಾ ಹೈಲೈಟ್ ಆಗಿತ್ತು. ಅದು ಖಳನಾಯಕನಾಗಿದ್ದ ವಿಜಯ್ ಸೇತುಪತಿ ಪಾತ್ರ. ಹಿಂದಿಯಲ್ಲಿ ಆ ಪಾತ್ರವನ್ನೂ ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆಯೂ ಇದೆ. ಆದ್ರೆ ಈ ಪ್ರಶ್ನೆಗೆ ಇನ್ನೂ ಯಾವುದೇ ಉತ್ತರ ಸಿಕ್ಕಿಲ್ಲ.
ಥಿಯೇಟರ್ ಗಳಲ್ಲಿ 50 % ಸೀಟಿಂಗ್ – ಕನ್ನಡದ ಯಾವೆಲ್ಲಾ ಸಿನಿಮಾಗಳಿಗೆ ಸಂಕಷ್ಟ..!
ಚುನಾವಣೆಗಳ ಮೇಲೆ ಯಾಕೆ ನಿರ್ಬಂಧ ಹೇರಿಲ್ಲ… ಥಿಯೇಟರ್ ಗಳನ್ನೇ ಟಾರ್ಗೆಟ್ ಮಾಡ್ತರೋದು ಯಾಕೆ..? – ಅಪ್ಪು ಆಕ್ರೋಶ..!
ಥಿಯೇಟರ್ ಗಳಲ್ಲಿ ಶೇ.50ರಷ್ಟು ಮಾತ್ರ ಅವಕಾಶ… ಕಿಚ್ಚ ಸುದೀಪ್ ಹೇಳಿದ್ದೇನು..?
ಮಾ. 31ಕ್ಕೆ ಹೇಳಿದ್ರೂ ಸಿನಿಮಾ ರಿಲೀಸ್ ಮಾಡುತ್ತಿರಲಿಲ್ಲ… ಸರ್ಕಾರದ ನಡೆ ವಿರುದ್ಧ ಅಪ್ಪು ಆಕ್ರೋಶ..!