ಸರಕಾರ ಕೊರೊನಾದಿಂದ ಸಾವನ್ನಪ್ಪಿದ ಎಲ್ಲರಿಗೂ ಪರಿಹಾರ ನೀಡಲಿ: ಡಿ.ಕೆ ಶಿವಕುಮಾರ Saaksha Tv
ರಾಮನಗರ: ಕೊರೊನಾದಿಂದ ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅವರೆಲ್ಲರಿಗೂ ಸರಕಾರ ಪರಿಹಾರ ವಿತರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾದಿಂದ ಆಸ್ಪತ್ರೆಗಳಲ್ಲಿ ಮೃತಪಟ್ಟವರಿಗೆ ಮಾತ್ರ ಸರಕಾರ ಪರಿಹಾರ ನೀಡುತ್ತಿದೆ. ಆದರೆ ವಸ್ತವದಲ್ಲಿ ಮೃತರ ಸಂಖ್ಯೆ ಬೇರೆ ಇದೆ ಅವರಿಗೂ ಪರಿಹಾರವನ್ನು ನೀಡಬೇಕು. ಸರಕಾರ ಪಿಡಿಒಗಳಿಂದ ಮನೆ ಮನೆ ಸರ್ವೆ ಮಾಡಿಸಲಿ ಇದರಿಂದ ಸತ್ಯ ಗೊತ್ತಾಗುತ್ತದೆ ಎಂದು ಮಾತನಾಡಿದರು.
ಅಲ್ಲದೇ ಸರಕಾರ ಬೆಂಬಲ ಬೆಲೆ ಅಡಿ ರಾಗಿ ಸೇರಿದಂತೆ ಇನ್ನೂ ಅನೇಕ ಪ್ರಮುಖ ಉತ್ಪನ್ನಗಳ ಖರೀದಿಗೆ ಮಿತಿ ಹೇರಿರುವುದು ಸರಿ ಅಲ್ಲ. ಈ ಹಿಂದಿನ ಪದ್ದತಿಯನ್ನೆ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿಕೆ ಪ್ರತಿಕ್ರಿಯಿಸಿದ ಅವರು ಯತ್ನಾಳ ರೀತಿ ನಾನು ರಸ್ತೆಯಲ್ಲಿ ಮಾತನಾಡಲ್ಲಾ ಸಮಯ ಬಂದಾಗ ಮಾತನಾಡುತ್ತೇನೆ ಎಂದರು.