Meghastar Chiranjeevi
ಟಾಲಿವುಡ್ ಮೆಘಾಸ್ಟಾರ್ ಚಿರಂಜೀವಿಗೆ ಕೊರೊನಾ ಪಾಸಿಟಿವ್ ಇದ್ದದ್ದು, ಇತ್ತೀಚೆಗಷ್ಟೇ ಗೊತ್ತಾಗಿತ್ತು. ಹೀಗಾಗಿ ಚಿರಂಜೀವಿ ಅವರು ಮನೆಯಲ್ಲಿಯೇ ಹೋ ಕ್ವಾರಂಟೈನಲ್ಲಿದ್ದು ರೆಸ್ಟ್ ಮಾಡ್ತಿದ್ರು. ಆದರೆ ಇದೀಗ ಅವರಿಗೆ ಕೋವಿಡ್ ನೆಗೆಟಿವ್ ಬಂದಿದೆ. ಗುರುವಾರ ನಡೆಸಲಾದ ಕೋವಿಡ್-19 ಪರೀಕ್ಷೆಯ ರಿಪೋರ್ಟ್ ನಲ್ಲಿ ನೆಗೆಟಿವ್ ಇರುವುದು ದೃಢವಾಗಿದೆ. ಈ ವಿಚಾರವನ್ನ ನಟ ಚಿರಂಜೀವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲು ಮೆಗಾ ಸ್ಟಾರ್ ಗೆ ಕೊರೊನಾ ಪಾಸಿಟಿವ್ ಅಂತ ವರದಿ ನೀಡಲಾಗಿತ್ತು. RT PCR ಕಿಟ್ ದೋಷದಿಂದ ಕೊರೊನಾ ಪಾಸಿಟಿವ್ ಎಂದು ಬಂದಿತ್ತು. ಆದರೆ ಕೊರೊನಾ ಸೋಂಕು ಇಲ್ಲದೇ ಇರುವುದಾಗಿ ಇದೀಗ ಚಿರಂಜೀವಿ ಅವರು ಸ್ಪಷ್ಟನೆ ನೀಡಿದ್ದು, ಅಬಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟ ಚಿರಂಜೀವಿ, ‘ವೈದ್ಯರತಂಡ ಮೂರು ವಿಭಿನ್ನ ಪರೀಕ್ಷೆಗಳನ್ನು ಮಾಡಿದ್ದಾರೆ. ನನಗೆ ಕೊರೊನಾ ನೆಗೆಟಿವ್ ಬಂದಿದೆ. ಈ ಮೊದಲು ಬಂದ ವರದಿಯಲ್ಲಿ ಲೋಪವಿತ್ತು. RT PCR ದೋಷದಿಂದ ವರದಿ ಪಾಸಿಟಿವ್ ತೋರಿಸಿತ್ತು. ಈ ಸಮಯದಲ್ಲಿ ನೀವೆಲ್ಲರೂ ತೋರಿಸಿದ ಕಾಳಜಿ, ಪ್ರೀತಿಗಾಗಿ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.
ಅಂದ್ಹಾಗೆ ಆಚಾರ್ಯ ಸಿನಿಮಾದ ಚಿತ್ರೀಕರಣಕ್ಕೆ ಹೊರಡುವ ಮೊದಲು ನಿಯಮದಂತೆ ಚಿರಂಜೀವಿ ಅವರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. (ನವೆಂಬರ್ 9) ಈ ವೇಳೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವುದಾಗಿ ಚಿರಂಜೀವಿ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದರು. ಆದರೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ, ಹೋಮ್ ಕ್ವಾರಂಟೈನ್ ನಲ್ಲಿ ಇರುವುದಾಗಿ ಚಿರಂಜೀವಿ ಹೇಳಿದ್ದರು. ಅಷ್ಟೇ ಅಲ್ಲ ಕೊರೊನಾ ಪಾಸಿಟಿವ್ ಬಂದಿದೆ ಎಂಬ ಕಾರಣಕ್ಕೆ ಚಿರಂಜೀವಿ ಅವರ ಅಭಿನಯದ ಬಹುನಿರೀಕ್ಷೆಯ ಆಚಾರ್ಯ ಸಿನಿಮಾದ ಚಿತ್ರೀಕರಣವನ್ನು ಮುಂದೂಡಿಕೆ ಮಾಡಲಾಗಿದೆ. ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭ ಮಾಡಲು ಸಿನಿಮಾತಂಡ ನಿರ್ಧರಿಸಿದೆ ಎಂದು ಹೇಳಲಾಗಿತ್ತು. ಇದೀಗ ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನಲೆ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
Meghastar Chiranjeevi
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel