ಧರ್ಮದ ಹೆಸರಲ್ಲಿ ಕೊಲ್ಲುವ ಗುಂಪುಗಳನ್ನ ರಾಜಕೀಯ ಪಕ್ಷಗಳಿಗೆ ಹೋಲಿಸುವುದು ತಪ್ಪಲ್ಲ : ಮೆಹಬೂಬಾ ಮುಫ್ತಿ..!
ಜಮ್ಮು ಕಾಶ್ಮೀರ : ಧರ್ಮದ ಹೆಸರಲ್ಲಿ ಜನರನ್ನು ಕೊಲ್ಲುವ ಗುಂಪುಗಳ ಜೊತೆ ರಾಜಕೀಯ ಪಕ್ಷಗಳನ್ನು ಹೋಲಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ತಮ್ಮ ಪುಸ್ತಕದಲ್ಲಿ ಹಿಂದುತ್ವವನ್ನು ಐಎಸ್ಐಎಸ್ ಮತ್ತು ಬೊಕೊ ಹರಾಮ್ ರೀತಿಯ ಸಂಘಟನೆಗಳಿಗೆ ಸಮೀಕರಿಸಿದ್ದಾರೆ.. ಈ ಸಂಬಂಧ ವಿವಾದ ಹೊತ್ತಿಕೊಂಡಿರುವ ಬೆನ್ನಲ್ಲೇ ಮೆಹಬೂಬಾ ಮುಫ್ತಿ ಈ ಹೇಳಿಕೆ ನೀಡಿದ್ದಾರೆ.
ಆರ್ಎಸ್ಎಸ್ ಮತ್ತು ಬಿಜೆಪಿಯು ಹಿಂದುತ್ವ ಮತ್ತು ಹಿಂದೂ ಧರ್ಮವನ್ನು ಹೈಜಾಕ್ ಮಾಡಿವೆ. ಸನಾತನ ಧರ್ಮವು ಕೋಮುವಾದವನ್ನು ಕಲಿಸುವುದಿಲ್ಲ ಎಂದು ಮೆಹಬೂಬಾ ಹೇಳಿದರು.
ಅಲ್ಲದೇ ಧರ್ಮದ ಹೆಸರಲ್ಲಿ ಹಿಂದು ಮತ್ತು ಮುಸ್ಲಿಮರು ಪರಸ್ಪರ ಹೊಡೆದಾಡಿಕೊಳ್ಳುವಂತೆ ಕೋಮುವಾದಿ ಪಕ್ಷಗಳು ಮಾಡುತ್ತವೆ. ಇಂಥ ಪಕ್ಷಗಳನ್ನು ಐಎಸ್ಐಎಸ್ ಅಥವಾ ಅಂತಹ ಯಾವುದೇ ಗುಂಪುಗಳಿಗೆ ಹೋಲಿಸಬಹುದು ಎಂದು ಹೇಳಿದ್ದಾರೆ.