Melukote sri cheluvanaryana swamy | ವಿಜೃಂಭಣೆಯಿಂದ ಜರುಗಿದ ತೆಪ್ಪೋತ್ಸವ
ಮೇಲುಕೋಟೆಯ ಕಲ್ಯಾಣಿಯಲ್ಲಿ ಚೆಲುವನಾರಾಯಣ ತೆಪ್ಪೋತ್ಸವ
ಮುತ್ತುಮುಡಿ ಅಲಂಕಾರದಲ್ಲಿ ಚೆಲುವನಾರಾಯಣನಿಗೆ ತೆಪ್ಪೋತ್ಸವ
ಚೆಲುವನಾರಾಯಣನ ತೆಪ್ಪೋತ್ಸವದಲ್ಲಿ ನೂರಾರು ಭಕ್ತರು ಭಾಗಿ
ವಿಶ್ವ ಪ್ರಸಿದ್ಧ ವೈರಮುಡಿ ಉತ್ಸವದ ಅಂಗವಾಗಿ ತೆಪ್ಪೋತ್ಸವ
ಶ್ರೀ ಚೆಲುವನಾರಾಯಣ ಸ್ವಾಮಿಗೆ ವೈರಮುಡಿ ಕಿರೀಟ ಪಟ್ಟಾಭಿಷೇಕ
ಮಂಡ್ಯ: ವಿಶ್ವ ಪ್ರಸಿದ್ಧ ವೈರಮುಡಿ ಉತ್ಸವದ ಅಂಗವಾಗಿ ಮೇಲುಕೋಟೆಯ ಕಲ್ಯಾಣಿಯಲ್ಲಿ ಚೆಲುವನಾರಾಯಣ ತೆಪ್ಪೋತ್ಸವ ಅತ್ಯಂತ ಸಂಭ್ರಮ ಸಡಗರದಿಂದ ನೆರವೇರಿತು,
ತೆಪೋತ್ಸವ ಹಿನ್ನೆಲೆಯಲ್ಲಿ ಮೇಲುಕೋಟೆಯ ಕಲ್ಯಾಣಿಗೆ ವಿಶೇಷ ದೀಪಾಂಲಕಾರ ಮಾಡಲಾಗಿತ್ತು. ವಿಶೇಷ ದೀಪಾಂಲಕಾರ ನಡುವೆ ಚೆಲುವ ನಾರಾಯಣನ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯಿತು.
ವೈರಮುಡಿ ಬ್ರಹ್ಮೋತ್ಸವ ಸಾಂಪ್ರದಾಯಿಕವಾಗಿ ಮೇಲುಕೋಟೆಯ ವಾರ್ಷಿಕ ಕಾರ್ಯಕ್ರಮವಾಗಿದೆ. ಇದನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ಕಾರ್ಯಕ್ರಮದ ನಾಲ್ಕನೇ ದಿನ ಶ್ರೀ ಚೆಲುವನಾರಾಯಣ ಸ್ವಾಮಿಗೆ ವೈರಮುಡಿ ಕಿರೀಟ ಪಟ್ಟಾಭಿಷೇಕ ನಡೆಯುತ್ತದೆ. ಈ ವೈಭವವನ್ನು ನೋಡಲು ದೇಶದ ಮೂಳೆ ಮೂಲೆಗಳಿಂದ ಜನರು ಮೇಲುಕೋಟೆಗೆ ಆಗಮಿಸುತ್ತಾರೆ. melukote sri cheluvanaryana swamy teppotsava









