ಆಟೋ ಚಾಲಕರೊಬ್ಬರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ನ್ನು ಮರಳಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಧಾರವಾಡದ ನಿಸ್ಸಾಮುದ್ದೀನ್ ಕಾಲೋನಿಯ ಮಹಿಳೆಯೊಬ್ಬರು 8 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯಿದ್ದ ಬ್ಯಾಗ್ ನ್ನು ಇಟ್ಟುಕೊಂಡು ನಾಗರಾಜ್ ಎಂಬ ವ್ಯಕ್ತಿಯ ಆಟೋದಲ್ಲಿ ಹುಬ್ಬಳ್ಳಿಯ ಗೋಕುಲ ಬಸ್ ನಿಲ್ದಾಣದಿಂದ ಹೊಸೂರು ನಿಲ್ದಾಣದವರೆಗೆ ಪ್ರಯಾಣ ಮಾಡಿದ್ದಾರೆ.
ಆದರೆ, ಇಳಿಯುವಾಗ ಮರತೆ ಹೋಗಿದ್ದಾರೆ. ಬಿಟ್ಟು ಹೋದ ಬ್ಯಾಗ್ ನಲ್ಲಿ 4 ತೊಲೆ ಬಂಗಾರ, 16 ತೊಲೆ ಬೆಳ್ಳಿ ಹಾಗೂ ಮನೆಯ ದಾಖಲಾತಿಗಳು ಇವೆ. ಕೂಡಲೇ ಆಟೋ ಚಾಲಕ ನಾಗರಾಜ್ ಪ್ರಯಾಣಿಕರಿಗೆ ತಲುಪಿಸಿದ್ದಾರೆ. ಹುಬ್ಬಳ್ಳಿಯ ಗೋಕುಲ ಠಾಣೆಯ ಪೊಲೀಸರು, ಆಟೋ ಚಾಲಕರ ಸಮ್ಮುಖದಲ್ಲಿ ಮರಳಿ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆಗೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.