ಪಾದಯಾತ್ರೆಯಿಂದ ನಮ್ಮ ಪಾರ್ಟಿ, ಸರ್ಕಾರಕ್ಕೆ ಎಫೆಕ್ಟ್ ಆಗಲ್ಲ : ಕೆ.ಸಿ.ನಾರಾಯಣಗೌಡ
ಮಂಡ್ಯ : ಪಾದಯಾತ್ರೆಯಿಂದ ನಮ್ಮ ಪಾರ್ಟಿ, ಸರ್ಕಾರಕ್ಕೆ ಏನೂ ಎಫೆಕ್ಟ್ ಆಗಲ್ಲ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೆ.ಆರ್.ಪೇಟೆಪಟ್ಟದಲ್ಲಿ ಮಾತನಾಡಿದ ನಾರಾಯಣಗೌಡ, ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸಿಗರು ಪಾದಯಾತ್ರೆ ಮಾಡ್ತಿದ್ದಾರೆ.
ಅರೆಸ್ಟ್ ಮಾಡಿದ್ರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಿಸೋದಕ್ಕೆ ಪ್ಲಾನ್ ಮಾಡಿದ್ದಾರೆ.
ಗೊಂದಲ ಸೃಷ್ಟಿ ಮಾಡಿದರೆ ಸರ್ಕಾರಕ್ಕೆ ಟೆನ್ಷನ್ ಕೊಡೋಣ ಅಂತ ಅಂದುಕೊಂಡಿದ್ದಾರೆ.
ಅದಕ್ಕಾಗಿ ಸಿಎಂ ಬುದ್ದಿವಂತಿಗೆಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ. ಪಾದಯಾತ್ರೆಯಿಂದ ನಮ್ಮ ಪಾರ್ಟಿ, ಸರ್ಕಾರಕ್ಕೆ ಏನೂ ಎಫೆಕ್ಟ್ ಆಗಲ್ಲ ಎಂದು ಕಿಡಿಕಾರಿದರು.
ಇನ್ನು ಕಾಂಗ್ರೆಸ್ ಪಾದಯಾತ್ರೆ ಅಗತ್ಯ ಇಲ್ಲ ಅನ್ನೋದು ರಾಜ್ಯದ ಜನರಿಗೆ ತಿಳಿದಿದೆ.
ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಎಲ್ಲರೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು.
ಕೆಲವರು ಲಸಿಕೆ ತೆಗೆದುಕೊಳ್ಳದೇ ಇರುವವರು ಇರುತ್ತಾರೆ. ಅಂತವರೆಗೆ ತೊಂದರೆ ಆಗುತ್ತೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಮತ್ತೆ ಜೈಲಿಗೆ ಕಳುಹಿಸಲು ಪ್ಲಾನ್ ಮಾಡ್ತಿದ್ದಾರೆ ಎಂದು ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ನಾರಾಯಣಗೌಡ, ಯಾತಕ್ಕಾಗಿ ಈ ರೀತಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಅಂತ ನಮಗೂ ಅರ್ಥ ಆಗಲಿಲ್ಲ.
ಅರೆಸ್ಟ್ ಮಾಡೋದಾಗಿದ್ರೆ ವಿಥನ್ ಎ ಮಿನಿಟ್ಸ್ ಮಾಡಬಹುದು. ಇದು ಗೊಂದಲ ಸೃಷ್ಟಿಸುವ ಸಂದರ್ಭ ಅಲ್ಲ. ಎಷ್ಟು ದಿನ ಪಾದಯಾತ್ರೆ ಮಾಡೋದಕ್ಕೆ ಸಾಧ್ಯನಾಲ್ಕು ದಿನದಲ್ಲಿ ತಣ್ಣಗೆ ಆಗುತ್ತಾರೆ ಎಂದರು.