Siddaramaiah | ಸಚಿವ ಸುನಿಲ್ ಕುಮಾರ್ ವಿರುದ್ಧ ಸಿದ್ದರಾಮಯ್ಯ ಗರಂ
ಬೆಂಗಳೂರು : ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು ಎಂದು ಆರೋಪಿಸಿರುವ ಸಚಿವ ಸಚಿವ ಸುನಿಲ್ ಕುಮಾರ್ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು ಎಂದು ಆರೋಪಿಸಿರುವ ಸಚಿವ ಸಚಿವ ಸುನಿಲ್ ಕುಮಾರ್ ಅವರು ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಲು ಹೊರಟಿರುವ ಹೊಸ ವಿದ್ಯುತ್ ಕಾಯ್ದೆಯನ್ನು ಒಮ್ಮೆ ಓದಿಕೊಳ್ಳುವುದು ಒಳಿತು.
ಕೊರೊನಾ ಕರ್ಫ್ಯೂ ಇದ್ದ ಕಾಲದಲ್ಲಿಯೇ ಕರಡನ್ನು ಸಿದ್ಧಪಡಿಸಿ, ನೆಪಮಾತ್ರಕ್ಕೆ ಚರ್ಚೆಗೆ ಬಿಟ್ಟಿರುವ ಹೊಸ ವಿದ್ಯುತ್ ಬಿಲ್ ನಲ್ಲಿಯೇ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವ ನಿರ್ಧಾರ ಇದೆ. ನಮ್ಮ ಸರ್ಕಾರ ಇಂತಹ ಪ್ರಸ್ತಾಪವನ್ನು ಮಾಡಿದ್ದರೆ ಸಚಿವ ಸುನಿಲ್ ಕುಮಾರ್ ಅದನ್ನು ಬಹಿರಂಗಪಡಿಸಬೇಕು.
ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವುದನ್ನು ಸಚಿವ ಸುನಿಲ್ ಕುಮಾರ್ ಮತ್ತು ಅವರ ಸರ್ಕಾರ ವಿರೋಧಿಸುವುದಾಗಿದ್ದರೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಹೊಸ ವಿದ್ಯುತ್ ಮಸೂದೆಯನ್ನು ತಿರಸ್ಕರಿಸಿ, ಸರ್ವಾನುಮತದ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳಿಸೋಣ.
2014-15ರಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ-118 ಮೆ.ವ್ಯಾ & ಪವನ ವಿದ್ಯುತ್ 2655 ಮೆ.ವ್ಯಾ ಇತ್ತು. 2018ರಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ 6,157 ಮೆ.ವ್ಯಾ ಮತ್ತು ಪವನ ವಿದ್ಯುತ್ 4,730 ಮೆ.ವ್ಯಾ ಆಗಿತ್ತು.@karkalasunil ಅವರೇ, ಇಲ್ಲಿಯೂ ಹೆಚ್ಚು ವಿದ್ಯುತ್ ಉತ್ಪಾದನೆ, ಹೆಚ್ಚು ಲಾಭ. ಮತ್ತೆ ನಷ್ಟ ಎಲ್ಲಿದೆ?
5/10#ಇಂಧನಇಲಾಖೆ— Siddaramaiah (@siddaramaiah) September 7, 2022
ಸಚಿವ ಸಚಿವ ಸುನಿಲ್ ಕುಮಾರ್ ಕಾಂಗ್ರೆಸ್ ಸರ್ಕಾರದ ಮೇಲೆ ಸಾಲದ ಸುಳ್ಳು ಆರೋಪ ಹೊರಿಸಿದ್ದಾರೆ. 2014-15ರಲ್ಲಿನ ವಿದ್ಯುತ್ ಉತ್ಪಾದನೆ-14,825 ಮೆ.ವ್ಯಾ.ಮಾತ್ರ. 2018 ರ ಸಾಲಿನ ವಿದ್ಯುತ್ ಉತ್ಪಾದನೆ- 28,741 ಮೆಗಾ ವ್ಯಾಟ್. ಹೆಚ್ಚು ಉತ್ಪಾದನೆ ಎಂದರೆ ಹೆಚ್ಚು ಲಾಭವಲ್ಲವೇ? ನಷ್ಟ ಎಲ್ಲಿದೆ?
2014-15ರಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ-118 ಮೆ.ವ್ಯಾ & ಪವನ ವಿದ್ಯುತ್ 2655 ಮೆ.ವ್ಯಾ ಇತ್ತು. 2018ರಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ 6,157 ಮೆ.ವ್ಯಾ ಮತ್ತು ಪವನ ವಿದ್ಯುತ್ 4,730 ಮೆ.ವ್ಯಾ ಆಗಿತ್ತು. ಸಚಿವ ಸುನೀಲ್ ಅವರೇ, ಇಲ್ಲಿಯೂ ಹೆಚ್ಚು ವಿದ್ಯುತ್ ಉತ್ಪಾದನೆ, ಹೆಚ್ಚು ಲಾಭ. ಮತ್ತೆ ನಷ್ಟ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. Minister Sunil Kumar Vs Siddaramaiah Garam