ಮಿಲಿಟಿರಿ ಕಂಟೋನ್ಮೆಂಟ್ಗೆ ವಿದ್ಯುತ್ ಮತ್ತು ನೀರು ಪೂರೈಕೆಯನ್ನು ಸ್ಥಗಿತಗೊಳಿಸಲು ಮುಂದಾದ ಸಚಿವ – Saaksha Tv
ತೆಲಂಗಾಣ : ತಮಗೆ ಬಯಸಿದಾಗ ರಸ್ತೆಗಳನ್ನು ಹೈದರಾಬಾದ್ ಕಂಟೋನ್ಮೆಂಟ್ನಲ್ಲಿರುವ ಮಿಲಿಟರಿ ಅಧಿಕಾರಿಗಳು ಮುಚ್ಚುವ ಕ್ರಮ ಸರಿಯಲ್ಲ ಎಂದು ತೆಲಂಗಾಣದ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಕೆಟಿಆರ್ ರಾವ್ ಆರೋಪಿಸಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಶನಿವಾರ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಕೆಟಿಆರ್, ತಾವು ಬಯಸಿದಾಗ ರಸ್ತೆಯನ್ನು ಮುಚ್ಚುವ ಕಂಟೋನ್ಮೆಂಟ್ ಅಧಿಕಾರಿಗಳ ಕ್ರಮದಿಂದ ಸಾಕಷ್ಟು ಮಂದಿ ತೊಂದರೆಗೆ ಒಳಗಾಗಿದ್ದಾರೆ. ಈ ರೀತಿಯಾಗಿ ಮುಂದುವರೆದರೆ, ನಾವು ಕಂಟೋನ್ಮೆಂಟ್ಗೆ ವಿದ್ಯುತ್ ಮತ್ತು ನೀರು ಪೂರೈಕೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಕಂಟೋನ್ಮೆಂಟ್‌ನ ಅಧಿಕಾರಿಗಳು ರಸ್ತೆಗಳನ್ನು ಮುಚ್ಚುವುದರಿಂದ ಸಿಕಂದರಾಬಾದ್ ಕ್ಲಬ್‌ನ ಪಕ್ಕದ ರಸ್ತೆಯ ಪಕ್ಕದಲ್ಲಿರುವ ಸಫಿಲ್‌ಗುಡಾ ನಿವಾಸಿಗಳಿಗೆ ಅನಾನುಕೂಲವಾಗುತ್ತಿದೆ. ಕಂಟೋನ್ಮೆಂಟ್ ಅಧಿಕಾರಿಗಳು ರಸ್ತೆಯನ್ನು ಮುಚ್ಚುವುದನ್ನು ಆಕ್ಷೇಪಾರ್ಹ ಮತ್ತು ಕಾನೂನುಬಾಹಿರ ಎಂದು 2021ರಲ್ಲೇ ಕೆಟಿಆರ್ ಪ್ರಸ್ತಾಪಿಸಿದ್ದರು.
ಈ ವೇಳೆ ಪ್ರತಿಪಕ್ಷವಾದ ಬಿಜೆಪಿ ಕೆಟಿಆರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಇದರ ಜೊತೆಗೆ ಕೆಟಿಆರ್ ಮಿಲ್ಟ್ರಿಗೆ ಬೆದರಿಕೆ ಹಾಕುತ್ತಿದ್ದಾರೆ. ಹೈದರಾಬಾದ್‌ನಿಂದ ಭಾರತೀಯ ಸೇನೆಯ ನೆಲೆಯನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿತು.