ಬಾಲಕಿಯ ಮೇಲೆ ಆಕೆಯ ಮನೆ ಮುಂದೆಯೇ ಅತ್ಯಾಚಾರವೆಸಗಿದ ಕಾಮುಕ
ಉತ್ತರಪ್ರದೇಶ : ಕಾಮುಕನೊಬ್ಬ 8ನೇ ತರಗತಿ ಬಾಲಕಿಯನ್ನ ಎಳೆದೊಯ್ದು ಆಕೆಯ ಮನೆಯ ಮುಂದೆಯೇ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಅಪರಾಧಗಳ ಆಗರವಾಗ್ತಿರುವ ಉತ್ತರ ಪ್ರದೇಶದಲ್ಲಿ ನಡೆದಿದೆ.. ಉತ್ತರ ಪ್ರದೇಶದ ಬಾಗ್ ಪತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.. ಸಂತ್ರಸ್ತ ಬಾಲಕಿ ತನ್ನ ತಂದೆ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದಳು. ಆಕೆಯನ್ನ 45 ವರ್ಷದ ಆರೋಪಿ ತನ್ನ ಹೊರಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿ ದೂರು ದಾಖಲಿಸಿದ್ಧಾರೆ..
ಧರ್ಮನಿಂದನೆ ಮಸೇಜ್ ಕಳಹಿಸಿದ ಪಾಕಿಸ್ತಾನಿ ಮಹಿಳೆಗೆ ಮರಣ ದಂಡನೆ…
ಅತ್ಯಾಚಾರ ವೇಳೆ ಬಾಲಕಿ ಕಿರುಚಾಡಿದ ಶಬ್ಧ ಕೇಳಿ ಸ್ಥಳಕ್ಕೆ ಧಾವಿಸಿದ ತಂದೆ ಆರೋಪಿಯೊಂದಿಗೆ ಹೊಡೆದಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿ ಅತ್ಯಾಚಾರ ಎಸಗಿ ಪಿಸ್ತೂಲ್‍ನಿಂದ ತನ್ನ ಮೇಲೆ ಹಲ್ಲೆ ನಡೆಸಿ, ಬೆದರಿಕೆಯೊಡ್ಡು ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿಸಿದ್ದಾರೆ. ಆದ್ರೆ ಈ ಘಟನೆ ನಡೆದ ಸುಮಾರು ದಿನಗಳ ನಂತರ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.. ಪೊಲೀಸರು ತನಿಖೆ ಆರಂಭಿಸಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ಧಾರೆ..







