72ನೇ ಮಿಸ್ ಯೂನಿವರ್ಸ್ (Miss Universe) ಆಗಿ ನಿಕರಾಗುವಾದ ಸುಂದರಿ ಕಿರೀಟ ಧರಿಸಿದ್ದಾರೆ.
ಎಲ್ ಸಾಲ್ವಡಾರ್ನಲ್ಲಿ ಅದ್ಧೂರಿಯಾಗಿ ಈ ಸ್ಪರ್ಧೆ ನಿನ್ನೆ ನಡೆಯಿತು. ಈ ಸ್ಪರ್ಧೆಯಲ್ಲಿ 90 ದೇಶಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಸುಂದರಿ ಶೆಯ್ನಿಸ್ ಪಲಾಸಿಯೋಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಮಿಸ್ ಯೂನಿವರ್ಸ್ ಪಟ್ಟ ಘೋಷಣೆಯಾಗಿದ್ದು, 23 ವರ್ಷದ ಶ್ವೇತಾ ಶಾರ್ದಾ ಭಾರತ ಪ್ರತಿನಿಧಿಸಿ ಸೆಮಿಫೈನಲ್ ಗೆ ಕಾಲಿಟ್ಟಿದ್ದಾರೆ. ಅಲ್ಲದೇ, ಅವರು ಅಗ್ರ 20 ಫೈನಲಿಸ್ಟ್ಗಳಲ್ಲಿ ಸ್ಥಾನ ಪಡೆಕೊಂಡಿದ್ದಾರೆ.
ನಿಕರಾಗುವಾದಿಂದ ಪ್ರತಿನಿಧಿಸಿದ ವಿಶ್ವ ಸುಂದರಿ ವಿಜೇತೆ ಶೆಯ್ನಿಸ್ ಅಲೋಂಡ್ರಾ ಪಲಾಸಿಯೊಸ್ ಕಾರ್ನೆಜೊ ಅವರು ಕಳೆದ ವರ್ಷದ ವಿಜೇತ ಆರ್’ಬೊನಿ ಗೇಬ್ರಿಯಲ್ ಅವರಿಂದ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 23 ವರ್ಷದ ಪಲಾಸಿಯೋಸ್ ಕಿರೀಟವನ್ನು ಮುಡಿಗೇರಿಸಿಕೊಂಡರೆ, ಥಾಯ್ಲೆಂಡ್ನ ಆಂಟೋನಿಯಾ ಪೋರ್ಸಿಲ್ಡ್ ರನ್ನರ್ ಅಪ್ ಆಗಿ ಹಾಗೂ ಆಸ್ಟ್ರೇಲಿಯಾದ ಮೊರಾಯಾ ವಿಲ್ಸನ್ ಎರಡನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ.