mission 2024 bjp: ದುರ್ಬಲ 40 ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ರ್ಯಾಲಿ ಸಿದ್ಧತೆ…
ಭಾರತೀಯ ಜನತಾ ಪಕ್ಷವು 2024 ರ ಲೋಕಸಭಾ ಚುನಾವಣೆಯ ಗೆಲುವಿಗೆ ಈಗಿನಿಂದಲೇ ತಯಾರಿಯನ್ನ ಆರಂಭಿಸಿದೆ. ಗೆಲುವಿಗಾಗಿ ಈಗಾಗಲೇ ನೀಲನಕ್ಷೆಯನ್ನ ಸಿದ್ಧಪಡಿಸಿಕೊಂಡಿದೆ.
144 ಲೋಕಸಭಾ ಕ್ಷೇತ್ರಗಳಲ್ಲಿ 40 ರ್ಯಾಲಿಗಳನ್ನು ಸಂಘಟಿಸಿದ್ದು, 2019 ರ ಎಲೆಕ್ಷನ್ ನಲ್ಲಿ ಸೋಲು ಕಂಡ ಮತ್ತು ಸೋಲನ್ನ ಎದುರಿಸಬೇಕಾಗಿದ್ದ ಕ್ಷೇತ್ರಗಳಲ್ಲಿ ರ್ಯಾಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಈ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಲೋಕಸಭೆ ಪ್ರವಾಸ ಯೋಜನೆ ಭಾಗವಾಗಿ ದೇಶಾದ್ಯಂತ 144 ದುರ್ಬಲ ಅಥವಾ ಕಳೆದುಹೋದ ಲೋಕಸಭಾ ಸ್ಥಾನಗಳನ್ನ ಮರಳಿ ಪಡೆಯಲು ಬಿಜೆಪಿ ಯೋಜಿಸಿದೆ. ಇದರ ಅಡಿಯಲ್ಲಿ ಪ್ರಧಾನಿ ಮೋದಿ ಅವರು 40 ಸ್ಥಳಗಳಲ್ಲಿ 40 ದೊಡ್ಡ ರ್ಯಾಲಿಗಳನ್ನು ನಡೆಸಲಿದ್ದಾರೆ. ಪ್ರಧಾನಿಯವರ ಈ 40 ಸಾರ್ವಜನಿಕ ಸಭೆಗಳು ಎಲ್ಲಾ 40 ಕ್ಲಸ್ಟರ್‌ಗಳಲ್ಲಿ ನಡೆಯಲಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಕೇಂದ್ರ ಕ್ಯಾಬಿನೆಟ್ ಮಂತ್ರಿಗಳು ಉಳಿದ 104 ಸ್ಥಾನಗಳ ಪ್ರಮುಖ ಜವಾಬ್ದಾರಿಯನ್ನು ಹೊಂದಿದ್ದು, ಅವರು ಇಲ್ಲಿ ರ್ಯಾಲಿಗಳನ್ನು ನಡೆಸಲಿದ್ದಾರೆ.
mission 2024 bjp: PM Modi rally preparations in weak 40 constituencies…