ಮಿಜೋರಾಂ : ಮನೆಯೊಳಗೂ ಇಡೀ ದಿನ ಮಾಸ್ಕ್ ಧರಿಸಲು ಸೂಚನೆ..!
ಮಿಜೋರಾಂ : ಮಿಜೋರಾಂನಲ್ಲಿ ಕೊರೊನಾ ಹಾವಳಿ ಹೆಚ್ಚಾಗ್ತಾಯಿರೋ ಬೆನ್ನಲ್ಲೇ ಮನೆಯೊಳಗೂ ಕೂಡ ಜನ ಇಡೀ ದಿನ ಮಾಸ್ಕ್ ಧರಿಸಬೇಕೆಂದು ಸರ್ಕಾರ ಸೂಚಿಸಿದೆ. ಹೌದು ಕೋವಿಡ್ ಪ್ರಕರಣಗಳ ಏರಿಕೆ ತಡೆಯುವಲ್ಲಿ ವಿಫಲವಾಗಿರುವ ಸರ್ಕಾರ ಇಂತಹದೊಂದು ಕ್ರಮಕ್ಕೆ ಮುಂದಾಗಿದ್ದು, 24/ 7 ಮಾಸ್ಕ್ ಧಾರಣೆಗೆ ಸೂಚಿಸಿದೆ. ಇದೆಲ್ಲಾದ್ರೂ ಹೋಗ್ಲಿ ಮನೆಯೊಳಗೆ ಕುಟುಂದವರು ಒಟ್ಟಾಗಿ ಕೂತು ಊಟ ಮಾಡಬಾರದು ಎಂದೂ ಕೂಡ ಸಲಹೆ ನೀಡಿದೆ. ಮಾಸ್ಕ್ ಧರಿಸಿ ಇದರಿಂದ ನೀವು ಆಮ್ಲಜನಕದ ಮಾಸ್ಕ್ ಧರಿಸಬೇಕಾಗಿ ಬರುವುದಿಲ್ಲ ಎಂಬ ಘೋಷಣೆಯೊಂದಿಗೆ 10 ದಿನಗಳ ಆಲ್ ಮಾಸ್ಕ್ ಅಭಿಯಾನವನ್ನು ಸರ್ಕಾರ ಹಮ್ಮಿಕೊಂಡಿದೆ.
ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಕೋವಿಡ್ ಪಾಸಿಟಿವಿಟಿ ದರ ಶೇ 15ರಿಂದ 30ರ ನಡುವೆ ಇರುವ ಕಾರಣ ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಹೇಳಿದೆ. ಊಟ ಮಾಡುವ ಸಮಯ ಹೊರತುಪಡಿಸಿ ಮತ್ತೆಲ್ಲಾ ಸಂದರ್ಭದಲ್ಲಿಯೂ ಮನೆ ಒಳಗೂ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ. ಅಲ್ಲದೇ ಆಗಾಗ ಕೈಗಳನ್ನು ಸ್ವಚ್ಛಗೊಳಿಸುವಂತೆಯೂ ಸ್ಯಾನಿಟೈಸರ್‌ಗಳನ್ನು ಬಳಸುವಂತೆಯೂ ಸಲಹೆ ನೀಡಿದೆ. ಕಳೆದ ತಿಂಗಳಿನಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿರುವ ಕಾರಣ ತಜ್ಞರ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.