ಸಿಡಿ ಹಿಂದೆ ಬಿಜೆಪಿ ಪದಾಧಿಕಾರಿಯ ಕೈವಾಡ : ಯತ್ನಾಳ್ ಹೊಸ ಬಾಂಬ್

1 min read
MLA basanagouda patil yatnal

ಸಿಡಿ ಹಿಂದೆ ಬಿಜೆಪಿ ಪದಾಧಿಕಾರಿಯ ಕೈವಾಡ : ಯತ್ನಾಳ್ ಹೊಸ ಬಾಂಬ್

ಬೆಂಗಳೂರು : ಸಿಡಿ ಹಿಂದೆ ಬಿಜೆಪಿ ಪದಾಧಿಕಾರಿಯ ಕೈವಾಡ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸಿಡಿ ಬಿಡುಗಡೆ ಹಿಂದೆ ಕಾಂಗ್ರೆಸ್ ಮಾತ್ರವಲ್ಲದೇ ಬಿಜೆಪಿಯವರೂ ಇದ್ದಾರೆ.

ಇಬ್ಬರೂ ಒಟ್ಟಾಗಿ ಸೇರಿ ಸಿಡಿ ಬಿಡುಗಡೆ ಮಾಡಿದ್ದಾರೆ. ಕಿಂಗ್ ಪಿನ್ ವ್ಯಕ್ತಿಯ ಮಗಳ ನಾಮಕರಣಕ್ಕೆ ಕಾಂಗ್ರೆಸ್ ಅಲ್ಲದೇ ಬಿಜೆಪಿಯವರ ಪೈಕಿ ಯಾರು ಹೋಗಿದ್ದಾರೆ ಎನ್ನುವುದು ಬಯಲಾಗಿದೆ.

MLA basanagouda patil yatnal

ಬಿಜೆಪಿಯ ಮೂರು, ನಾಲ್ಕು ಮಂದಿ ಇದ್ದಾರೆ. ಸಿಡಿ ಹಿಂದೆ ಬಿಜೆಪಿ ಪದಾಧಿಕಾರಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಈ ಪ್ರಕರಣದಲ್ಲಿ ರಾಜ್ಯ ಪೊಲೀಸರಿಂದ ನ್ಯಾಯ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟ ಯತ್ನಾಳ್, ಸಿಡಿ ಪ್ರಕರಣದಲ್ಲಿ ತುಂಬಾ ಜನರ ಕೈವಾಡ ಇದೆ.

ಹೀಗಾಗಿ ಈ ಬಗ್ಗೆ ವಿಸ್ತ್ರತ ತನಿಖೆಯಾಗಬೇಕು. ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದರು.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd