ಬಾ ಲೇ ಮಗನೇ ಎಂದು ತೋಳು ತಟ್ಟಿದ ಭೀಮಾನಾಯ್ಕ್
ಬಳ್ಳಾರಿ : ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಪುರಸಭೆ ಮುಂದೆ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆಯಾಗಿದೆ.
ಈ ವೇಳೆ ಶಾಸಕ ಭೀಮನಾಯ್ಕ ತೋಳು ತಟ್ಟಿ ಬಾ ಲೇ ಮಗನೇ ಎಂದು ಎದುರಾಳಿಗಳಿಗೆ ಸವಾಲ್ ಹಾಕಿರುವ ವಿಡಿಯೋ ಸದ್ಯ ಭಾರಿ ವೈರಲ್ ಆಗುತ್ತಿದೆ.
ನಿನ್ನೆ ಹಗರಿಬೊಮ್ಮನಹಳ್ಳಿ ಚುನಾವಣೆ ನಡೆಯಿತು ಈ ವೇಳೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಗಳವಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕ ಭೀಮಾನಾಯ್ಕ ವಿರುದ್ಧ ಘೋಷಣೆ ಕೂಗಿದ್ದಾರೆ.
ಮಾಜಿ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಸೇರ್ಪಡೆ
ಇದರಿಂದ ರೊಚ್ಚಿಗೆದ್ದ ಭೀಮಾನಾಯಕ್ ಕುಸ್ತಿಪಟುವಿನಂದ ತೋಳು ತಟ್ಟಿ ಬಾ ಲೇ ಮಗನೇ ಎದುರಾಳಿಗಳಿಗೆ ಸವಾಲ್ ಹಾಕಿದ್ದಾರೆ.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಬೆಲೆಯಿಲ್ಲ : ಕಟೀಲ್
ಇದರಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇನ್ನು ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ಇನ್ನು ಈ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಶಾಸಕರ ಕೆಲಸ ಜನಸೇವೆ, ಕುಸ್ತಿಯಲ್ಲ.
ಭೀಮಾ ನಾಯ್ಕ್ ತೋಳು ತಟ್ಟಿದರೆ ಅದು ತಪ್ಪು. ನಮ್ಮ ಶಾಸಕ ಅಂತ ನಾವು ಸಮರ್ಥನೆ ಮಾಡುವುದಿಲ್ಲ.
ಒಂದು ವೇಳೆ ಭೀಮಾನಾಯ್ಕ್ ಹಾಗೆ ಮಾಡಿದರೆ ಅದು ತಪ್ಪು ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel