ಓಬಿಸಿ ಮೋರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ವಿಶ್ವನಾಥ್ ಅವರು ಮಾನಾಡಿದ್ದು , ಕಳೆದ ಮೂರು ದಿನಗಳಿಂದ ರಾಷ್ಟ್ರೀಯ ಹಿಂದುಳಿದ ಮೋರ್ಚಾದ ಚಿಂತನ ಮಂತನ ಕಾರ್ಯಕ್ರಮ ನಡೆಯುತ್ತಿದೆ. ಮೊದಲ ಬಾರಿ ರಾಷ್ಟ್ರೀಯ ಓಬಿಸಿ ಮೋರ್ಚಾ ಕಾರ್ಯಕ್ರಮ ನಡೆಯುತ್ತಿದೆ. ಲಕ್ಷ್ಮಣ ಜಿ ನೇತೃತ್ವದಲ್ಲಿ ನಡೆಯುತ್ತಿದೆ. ಇಡೀ ದೇಶದಲ್ಲಿ 50% ಜನಾಂಗ ಓಬಿಸಿ ಇದೆ. ಇಡೀ ದೇಶದಲ್ಲಿ ಓಬಿಸಿ ಜನಾಂಗಕ್ಕೆ ಏನೆಲ್ಲಾ ಯೋಜನೆ ನೀಡಲಾಗ್ತಿದೆ ಅನ್ನೋದು ತಿಳಿಸಬೇಕು ಎಂದಿದ್ದಾರೆ..
ಇದೇ ವೇಳೆ ಓಬಿಸಿ ಜನಾಂಗಕ್ಕೆ ಏನು ಮಾಡಲಾಗ್ತಿದೆ ಅನ್ನೋದು ತಿಳಿಸಲಾಗ್ತಿದೆ. ಜಮ್ಮು ಕಾಶ್ಮೀರದಿಂದ ಹಿಡಿದು ಇಲ್ಲಿಯವರೆಗೂ ಬಂದಿದ್ದಾರೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಭಾಗಿಯಾಗಿದ್ರು. ಈಗ ನಡ್ಡಾ, ಸಿಎಂ ಬೊಮ್ಮಾಯಿ ಕೂಡ ಅವಧಿ ತೆಗೆದುಕೊಂಡಿದ್ದಾರೆ. ವರ್ಲ್ಡ್ ಟ್ರೇಡ್ ಆರ್ಗನೈಸೇಶನ್ ಸಮಸ್ಯೆ ಏನಿತ್ತು, ಅದರ ಸಮಸ್ಯೆ ಬಗೆಹರಿಸಲಾಗಿದೆ. ದೊಡ್ಡ ಹಡಗಿನಲ್ಲಿ ಮೀನು ಹಿಡಿಯುತ್ತಿದ್ರು, ಈಗ ಸಣ್ಣ ದೋಣಿಯವರಿಗೂ ಅವಕಾಶ ಮಾಡಿಕೊಡಲಾಗಿದೆ. ಈ ರೀತಿಯ ಅನೇಕ ಸಮಸ್ಯೆ ಬಗೆಹರಿಸೋ ಬಗ್ಗೆ ಚರ್ಚ ನಡೆದಿದೆ ಎಂದು ತಿಳಿಸಿದರು..








