ಕೆಎಸ್.ಆರ್ ಟಿಸಿ ಯಿಂದ ಮೊಬೈಲ್ ಸ್ಯಾನಿಟೈಸರ್ ಬಸ್ ” ಸಾರಿಗೆ ಸಂಜೀವಿನಿ ” ಶುರುವಾಗಿದೆ. ಹತ್ತು ವರ್ಷದ ಹಳೆಯ ಬಸ್ ಗಳನ್ನು ಸ್ಯಾನಿಟೈಸರ್ ಬಸ್ ಗಳನ್ನಾಗಿ ಪರಿವರ್ತಿಸಲಾಗಿದೆ. 20 ಸಾವಿರ ರೂಪಾಯಿ ವೆಚ್ಚದಲ್ಲಿ ಬಸ್ ಗಳನ್ನು ನಿರ್ಮಿಸಲಾಗಿದೆ. ಬಸ್ ಮುಂಭಾಗ ಹತ್ತಿ ಹಿಂಭಾಗ ಇಳಿದರೆ ಸಂಪೂರ್ಣವಾಗಿ ದೇಹಕ್ಕೆ ದ್ರಾವಣ ಸಿಂಪಡಣೆ ಆಗುತ್ತದೆ. ಬೆಂಗಳೂರು ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ , ಮೆಡಿಕಲ್, ಪೌರ ಕಾರ್ಮಿಕರ ಅನುಕೂಲಕ್ಕಾಗಿ ಬಸ್ ಗಳು ಸಂಚರಿಸುತ್ತವೆ.
ಮೊಬೈಲ್ ಸ್ಯಾನಿಟೈಸರ್ ಬಸ್ ” ಸಾರಿಗೆ ಸಂಜೀವಿನಿ” ಬಸ್ ಗಳಿಗೆ ಚಾಲನೆ ನೀಡಿದ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ
ಸಾರ್ವಜನಿಕರ ಅನೂಕೂಲಕ್ಕೆ ಸಾರಿಗೆ ಸಂಜೀವಿನಿ- ಮೊಬೈಲ್ ಸ್ಯಾನಿಟೈಸರ್ ಬಸ್ ಗಳನ್ನು ಬಿಡಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳ ಡಿಪೋಗಳಲ್ಲಿ ಈ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.








