ಚುನಾವಣೆ ಪ್ರಚಾರಕ್ಕಾಗಿ ಮಾನ ಪಕ್ಕಕ್ಕೆ ಇಟ್ಟ ಮಾಡೆಲ್ – ಬೆತ್ತಲೆಯಾಗಿ ಫೋಟೋಗೆ ಫೋಸ್..! ಈಕೆ ನೀಡಿರುವ ಭರವಸೆಗಳು ಶಾಕಿಂಗ್

1 min read

ಚುನಾವಣೆ ಪ್ರಚಾರಕ್ಕಾಗಿ ಮಾನ ಪಕ್ಕಕ್ಕೆ ಇಟ್ಟ ಮಾಡೆಲ್ – ಬೆತ್ತಲೆಯಾಗಿ ಫೋಟೋಗೆ ಫೋಸ್..! ಈಕೆ ನೀಡಿರುವ ಭರವಸೆಗಳು ಶಾಕಿಂಗ್

ಚುನಾವಣೆಗಳ ಪ್ರಚಾರಕ್ಕೆ ಸ್ಟಾರ್ ಪ್ರಚಾರಕರನ್ನ ಕರೆಸಿಕೊಳ್ಳೋದು ರಾಜಕಾರಣಿಗಳ ಮೇನ್ ಸ್ಟ್ರಾಟರ್ಜಿ.. ಪ್ರಚಾರದ ವೇಳೆ ಹಾಡು ಹಾಡೋದು , ಡೈಲಾಗ್ಸ್ ಹೊಡೆದು ಮನರಂಜಿಸುವುದು , ಅದನ್ನೂ ಮೀರಿದ್ರೆ ನಟಿಯರು ಡ್ಯಾನ್ಸ್ ಮಾಡಿ ಮತದಾರರ ಗಮನ ಸೆಳೆಯೋದು ಭಾರತದಲ್ಲಿ ಕಾಮನ್.. ಆದರೆ ರಾಜಕೀಯದ ಪ್ರಚಾರಕ್ಕೆ ಮಾನ ಮರ್ಯಾದೆಯ ಎಲ್ಲಾ ಹದ್ದು ಮೀರಿ ಯಾರು ತಾನೆ ನಡೆದುಕೊಳ್ತಾರೆ..

ಆದ್ರೆ ಮೆಕ್ಸಿಕೋದಲ್ಲಿ ಮಾಡೆಲ್ ಒಬ್ಬರು ಖುದ್ದು ಚುನಾವಣೆಗೆ ಸ್ಪರ್ಧಿಸಿದ್ದು ಮತದಾರರನ್ನು ಸೆಳೆಯಲು ಬೆತ್ತಲೆಯಾಗಿ ಫೊಟೋಗೆ ಫೋಸ್ ನೀಡಿದ್ದಾಳೆ. ಅಷ್ಟೇ ಅಲ್ಲದೆ ಆಕೆ ನೀಡಿರುವ ಭರವಸೆಗಳು ಜನರ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ..

ಮೆಕ್ಸಿಕೋದ ಮಾಡೆಲ್ ರೋಸ್ಸಿಯೊ ಪಿನೊ ಅಲಿಯಾಸ್ ಲಾ ಗ್ರೊಸೇರಾ ಇದೀಗ ಮೆಕ್ಸಿಕೋದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಬೆತ್ತಲೆಯಾಗಿ ಫೋಸ್ ನೀಡಿದ್ದಾರೆ. ಜೊತೆಗೆ ಶಾಕಿಂಗ್ ಭರವಸೆಗಖನ್ನ ನೀಡಿದ್ದಾರೆ. ತಾವು ಗೆದ್ದರೆ ಸ್ತನಗಳನ್ನು ಸುಂದರಗೊಳಿಸುವ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.

‘ಸ್ತನಗಳುಳ್ಳ ಮಹಿಳೆ ಸಬಲೀಕೃತ ಮಹಿಳೆ’, ‘ನೀವು ನನಗೆ ನೀಡುವ ಮತದಿಂದ ಇಬ್ಬರಿಗೆ ಸಹಾಯವಾಗುತ್ತದೆ’ ಇನ್ನಿತರೆ ಸ್ಲೋಗನ್ಗಳನ್ನು ಅವರು ತಮ್ಮ ಚುನಾವಣಾ ಪ್ರಚಾರ ಜಾಹೀರಾತಿನಲ್ಲಿ ಬಳಸಿದ್ದಾರೆ. ‘ಯಾವುದೇ ಮಹಿಳೆಯನ್ನು ಕೇಳಿ ನೋಡಿ ಅವರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಸುಂದರವಾಗಿ ಕಾಣಬೇಕೆಂಬ ಆಸೆ ಇರುತ್ತದೆ ಆದರೆ ಹಣವಿರುವುದಿಲ್ಲ. ಹಾಗಾಗಿ ನನ್ನನ್ನು ಗೆಲ್ಲಿಸಿದರೆ ಮಹಿಳೆಯರಿಗೆ ಬ್ರೆಸ್ಟ್ ಇಂಪ್ಲ್ಯಾಂಟ್ ಮಾಡಿಸುತ್ತೇನೆ. ಸ್ತನ ಕ್ಯಾನ್ಸರ್ ನಿಂದ ಗುಣಮುಖರಾದವರಿಗೂ ಇದು ಸಹಾಯವಾಗಲಿದೆ’ ಎಂದಿದ್ದಾರೆ ರೋಸ್ಸಿಯೊ.

ರೋಸ್ಸಿಯೊ ಪ್ರೋಗ್ರೆಸ್ಸಿವ್ ಸೋಷಿಯಲ್ ನೆಟ್ವರ್ಕ್ ಪಕ್ಷದಿಂದ ಚೇಂಬರ್ ಆಫ್ ಡೆಪ್ಯೂಟೀಸ್ ಸ್ಥಾನಕ್ಕೆ ಸೊನಾರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಚುನಾವಣೆಯು ಜೂನ್ 06ಕ್ಕೆ ನಡೆಯಲಿದೆ.
ಅಂದ್ಹಾಗೆ ಈಕೆ ಖಾಸಗಿ ವಿಡಿಯೋ, ಚಿತ್ರಗಳನ್ನು ಗ್ರಾಹಕರಿಗೆ ನೀಡುವ ‘ಓನ್ಲಿ ಫ್ಯಾನ್’ ವೆಬ್ಸೈಟ್ನಲ್ಲಿ ಮಾಡೆಲ್ ಆಗಿದ್ದು, ಇದೇ ವೆಬ್ಸೈಟ್ ಮೂಲಕವೇ ಜನಪ್ರಿಯತೆಗಳಿಸಿದ್ದಾರೆ. ಇದೀಗ ‘ಓನ್ಲಿ ಫ್ಯಾನ್’ ವೆಬ್ಸೈಟ್ನಿಂದ ಹೊರಗೆ ಬಂದಿರುವ ರೋಸ್ಸಿಯೊ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಪ್ರಸ್ತುತ ಗರ್ಭಿಣಿ ಆಗಿರುವ ರೋಸ್ಸಿಯೊ ಅರೆ ಬೆತ್ತಲೆ ಫೊಟೊಗಳನ್ನು ಚುನಾವಣೆ ಪ್ರಚಾರಕ್ಕಾಗಿ ನೀಡಿದ್ದಾರೆ. ‘ಮತ ನೀಡಿ’ ಎಂಬ ಜಾಹೀರಾತಿನಲ್ಲಿ ರೋಸ್ಸಿಯೊರ ಅರೆ ಬೆತ್ತಲೆ ಚಿತ್ರಗಳು , ಪೋಸ್ಟರ್ ಗಳು ಎಲ್ಲೆಡೆ ಕಣ್ಣಿಗೆ ಬೀಳುತ್ತಿದೆ.. ಸಾಮಾಜಿಕ ಜಾಲತಾಣಗಳಲ್ಲಿಯೂ ಇದು ವೈರಲ್ ಆಗ್ತಿದೆ.

ಆದ್ರೆ ಕೆಲ ಒಳ್ಳೆಯ ಹೇಳಿಕೊಳ್ಳುವಂತಹ ಭರವಸೆಗಳನ್ನೂ ನೀಡಿರುವ ಆಕೆ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯವನ್ನು ತಡೆಯಲು ಕಠಿಣ ಕಾನೂನು ತರುವ ಭರವಸೆಯನ್ನ ನೀಡಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡದ ಪೋಷಕರನ್ನು ಶಿಕ್ಷಿಸುವಂತೆ ಕಾನೂನು ತರುವುದಾಗಿ ಭರವಸೆ ನೀಡಿದ್ದಾರೆ.

ಈ ಗಿರಿಧಾಮದಲ್ಲಿದೆ ೧೨ ವರ್ಷಗಳಿಗೊಮ್ಮೆ ಬಿಡುವ ಹೂವು..! ಮುನ್ನಾರ್ ಟೀ ಮ್ಯೂಸಿಯಂ ಗೆ ಫೇಮಸ್..!

ಪಶ್ಚಿಮ ಬಂಗಾಳದಲ್ಲಿದೆ 6 ಅತ್ಯಂತ ಭಿನ್ನ ರೈಲುನಿಲ್ದಾಣಗಳು – ಘೋಸ್ಟ್ ಸ್ಟೇಷನ್ ,  ಹೆಸರಿಲ್ಲದ ನಿಲ್ದಾಣ, ಇಂಟರೆಸ್ಟಿಂಗ್ ವಿಚಾರಗಳು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd