ಬಾಂಗ್ಲಾದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ಜೈಲು ಸೇರಿದ್ದೆ – ಮೋದಿ..!
ಬಾಂಗ್ಲಾದೇಶ : ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ 50ನೇ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಲು ಪ್ರವಾಸ ತೆರಳಿದ್ದಾರೆ. ಬಾಂಗ್ಲಾ ಜನ ಮೋದಿಯವರನ್ನ ಬಹಳ ಆಧರದಿಂದ ಸ್ವಾಗತಿಸಿದ್ದಾರೆ.
ಈ ವೇಳೆ ಬಾಂಗ್ಲಾದಲ್ಲಿ ಜನರನ್ನ ಉದ್ದೇಶಿಸಿ ಮಾತನಾಡಿರುವ ನರೇಂದ್ರ ಮೋದಿ ಅವರು 1971ರ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಮಾತನಾಡಿ ತಾವು ಜೈಲಿಗೆ ತೆರಳಿದ್ದ ದಿನಗಳನ್ನ ನೆನೆದಿದ್ದಾರೆ.
ಮುಜಿದ್ ಜಾಕೆಟ್ ಧರಿಸಿ ಮಾತನಾಡಿದ ಮೋದಿ ಅವರು ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯ ಸೇನೆ ಯಾವ ರೀತಿಯ ಪಾತ್ರ ವಹಿಸಿತ್ತು ಎಂದು ಹೇಳುತ್ತಾ ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಬಾಂಗ್ಲಾದೇಶದ ಸೈನಿಕರದ್ದು ಮಾತ್ರವಲ್ಲದೆ ಭಾರತೀಯ ಸೈನಿಕರ ರಕ್ತವೂ ಈ ಮಣ್ಣಿನಲ್ಲಿ ಸೇರಿದೆ. ನಾನು ಕೂಡ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ಜೈಲಿಗೆ ಹೋಗಿದ್ದೆ ಎಂದು ತಮ್ಮ ಹಳೆಯ ದಿನಗಳನ್ನ ಸ್ಮರಿಸಿದ್ದಾರೆ.
ಅಲ್ಲದೇ ಇದು ನನ್ನ ಜೀವನದ ಅವಿಸ್ಮರಣೀಯವಾದ ದಿನ. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾಣತ್ಯಾಗ ಮಾಡಿದ ಬಾಂಗ್ಲಾದೇಶೀಯ ಸೇನೆಯ ಜೊತೆ ಕೈಜೋಡಿಸಿದ ಭಾರತೀಯ ಸೈನಿಕರ ಕೊಡುಗೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ನಮ್ಮ ದೇಶದ ಸೈನಿಕರ ಧೈರ್ಯ, ತ್ಯಾಗವನ್ನು ನಾವು ಮರೆತಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಆಗ ನನಗೆ ಆಗ 20 ವರ್ಷಗಳಿರಬಹುದು. ನಾನು ಮತ್ತು ನನ್ನ ಜೊತೆಗಿದ್ದ ವಿದ್ಯಾರ್ಥಿಗಳು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿದ್ದೆವು. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಾನು ಜೈಲಿಗೂ ಹೋಗಿ ಬಂದಿದ್ದೆ ಎಂದು ಈ ವೇಳೆ ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶದಲ್ಲಿ ಕೊರೊನಾ 2ನೇ ಅಲೆಯ ಅಬ್ಬರ – 62,258 ಕೇಸಸ್ ಪತ್ತೆ , ಬಲಿಯಾದವರೆಷ್ಟು..?
ಟ್ವಿಟ್ಟರ್ ನಲ್ಲಿ #LieLikeModi ಟ್ರೆಂಡಿಂಗ್ : ಕಾರಣವೇನು ಗೊತ್ತಾ..?
NETFLIX , AMAZON ಸೇರಿ ಹಲವು ಒಟಿಟಿಗಳ ಮೇಲಿನ ಬಾಕಿ ಕೇಸ್ ಗಳಿಗೆ ತಡೆ ನೀಡಿದ ಸುಪ್ರೀಂ..!